ಬೆಂಗಳೂರು: ತೆಲುಗು ನಟ ಬೆಳ್ಳಂಕೊಂಡ ಸಾಯಿ ಶ್ರೀನಿವಾಸ್ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ಧಾರೆ.

33 ವರ್ಷದ ಸಾಯಿ ಶ್ರೀನಿವಾಸ್ ಅವರು ತಮ್ಮ ಬಹುಕಾಲದ ಗೆಳತಿ ಕಾವ್ಯಾ ರೆಡ್ಡಿ ಅವರನ್ನು ವರಿಸಿದ್ದಾರೆ.

ಏಪ್ರಿಲ್ 29 ರಂದು ಅವರು ಆಪ್ತರ ಸಮ್ಮುಖದಲ್ಲಿ ಕಾವ್ಯಾ ಅವರನ್ನು ಶಾಸ್ತ್ರೋಕ್ತವಾಗಿ ವಿವಾಹವಾದರು. ಮೇ 1 ರಂದು ಹೈದರಾಬಾದ್ನಲ್ಲಿ ಅದ್ಧೂರಿ ಆರತಕ್ಷತೆ ನೆರವೇರಿತು. ತೆಲುಗು ಚಿತ್ರರಂಗದ ಖ್ಯಾತನಾಮರು ಭಾಗವಹಿಸಿದ್ದರು.

2010ರಲ್ಲಿ ಚಿತ್ರರಂಗ ಪ್ರವೇಶಿಸಿದ ಸಾಯಿ ಶ್ರೀನಿವಾಸ್, 2014 ರಲ್ಲಿ ಅಲ್ಲುಡು ಸೀನು ಮೂಲಕ ಮಿಂಚಿದರು.

ಜಯ ಜಾನಕಿ ನಾಯಕ, ರಾಕ್ಷಸುಡು, ಧೀರ, ಇತ್ತೀಚಿನ ಕಿಷ್ಕಿಂಧಾಪುರಿ ಸೇರಿದಂತೆ 14 ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.