ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಗ ಚಿತ್ರದ ಬಹುನಿರೀಕ್ಷೆಯ ‘ಮಳೆಯೇ ಮಳೆಯೇ’ ವಿಡಿಯೊ ಸಾಂಗ್‌ ಬಿಡುಗಡೆ

Last Updated 4 ಸೆಪ್ಟೆಂಬರ್ 2020, 8:15 IST
ಅಕ್ಷರ ಗಾತ್ರ

ದುನಿಯಾ ವಿಜಯ್‌ ನಿರ್ದೇಶನ ಮತ್ತು ನಟನೆಯ ‘ಸಲಗ’ ಚಿತ್ರದ ಬಹು ನಿರೀಕ್ಷೆಯೆ ‘ಮಳೆಯೇ ಮಳೆಯೇ’ ಲಿರಿಕಲ್‌ ವಿಡಿಯೊ ಹಾಡನ್ನು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಶುಕ್ರವಾರಬೆಳಿಗ್ಗೆ‌ ಬಿಡುಗಡೆ ಮಾಡಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಅವರ ಕಚೇರಿಯಲ್ಲಿ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಸರಳವಾಗಿ ನಡೆಯಿತು.ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಶನಿವಾರ ಬೆಳಿಗ್ಗೆ 11 ಗಂಟೆಯಿಂದ ವೀಕ್ಷಣೆಗೆ ಲಭ್ಯವಾಗಲಿದೆ.

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ‘ಹ್ಯಾಂಡ್ಸ್‌ ಅಪ್’‌ ಹಾಡಿನ ಖ್ಯಾತಿಯ ನಾಗಾರ್ಜುನ ಶರ್ಮ ಅವರಸಾಹಿತ್ಯ ರಚನೆಯ ‘ಮಳೆಯೇ ಮಳೆಯೇ’ ಹಾಡನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಪುನೀತ್‌, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದ ನಾಯಕಿ ಸಂಜನಾ ಆನಂದ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಕಾರ್ಯಕಾರಿ ನಿರ್ಮಾಪಕ ನಾಗೇಂದ್ರ‌, ಸಂಗೀತ ನಿರ್ದೇಶಕ ಚರಣ್ ರಾಜ್, ಸಹ ನಿರ್ದೇಶಕ ಅಭಿ‌, ಛಾಯಾಗ್ರಾಹಕ ಶಿವಸೇನ ಸೇರಿದಂತೆ ‘ಸಲಗ’ ಚಿತ್ರ ತಂಡದ ಸದಸ್ಯರು ಹಾಜರಿದ್ದರು.

ಅಂದಹಾಗೆ ಈ ಹಾಡಿಗೆ ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದು, ಈ ಹಾಡು ಈಗಾಗಲೇ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇದು ‘ಸಲಗ’ ಚಿತ್ರದ ಪ್ರಮುಖ ಆಕರ್ಷಣೆಯೂ ಆಗಿದ್ದು, ಹಾಡಿನ ಆಡಿಯೊ ಸಿನಿಪ್ರಿಯರ ಮನಗೆದ್ದಿದೆ. ಈ ಹಾಡಿನ ಚಿತ್ರೀಕರಣ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಮತ್ತು ಸಕಲೇಶಪುರದ ಸುತ್ತಮುತ್ತಲಿನ ರಮ್ಯತಾಣಗಳಲ್ಲಿ ಮಳೆಯ ನಡುವೆಯೇ ನಡೆದಿದೆ.

ಈ ಸಿನಿಮಾ ಚಿತ್ರೀಕರಣಪೂರ್ಣಗೊಂಡಿದ್ದು, ಸೆನ್ಸಾರ್‌ ಮಂಡಳಿಯಿಂದ ಇನ್ನಷ್ಟೇ ಪ್ರಮಾಣಪತ್ರ ಪಡೆಯಬೇಕಿದೆ. ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಚಿತ್ರತಂಡ,ಚಿತ್ರಮಂದಿರಗಳ ಬಾಗಿಲು ತೆರೆಯುವುದನ್ನು ಎದುರು ನೋಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT