ಇದರಿಂದ ರೋಸಿಹೋಗಿರುವ ಸಲ್ಮಾನ್, ಸೆಟ್ನಲ್ಲಿ ಸೆಕ್ಯುರಿಟಿಯನ್ನು ಹೆಚ್ಚು ಮಾಡುವಂತೆ ತಿಳಿಸಿದ್ದಾರೆ. ಹಾಗೇ ಚಿತ್ರೀಕರಣದ ಸ್ಥಳದಲ್ಲಿ ಚಿತ್ರತಂಡದ ಸದಸ್ಯರು ಫೋನ್ ಬಳಸುವುದನ್ನು ನಿಷೇಧಿಸಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಿರ್ದೇಶಕ ಮಹೇಶ್ ಮಂಜ್ರೇಕರ್ ಮಗಳು ಸಾಯಿನಟಿಸುತ್ತಿದ್ದಾರೆ.ಸಿನಿಮಾದಲ್ಲಿ ಸಲ್ಮಾನ್ ಅವರು ಯುವಕನಾಗಿದ್ದಾಗ ನಡೆಯುವ ಪ್ರೇಮ ಪ್ರಸಂಗದ ಭಾಗದಲ್ಲಿ ಸಾಯಿ ಜೋಡಿಯಾಗಿ ನಟಿಸುತ್ತಿದ್ದಾರೆ.ಇದು ಸಾಯಿ ಅವರ ಚೊಚ್ಚಲ ಚಿತ್ರವಾಗಿದ್ದರಿಂದಅವರ ಫಸ್ಟ್ಲುಕ್ ಅನ್ನು ವಿಭಿನ್ನವಾಗಿ ತೋರಿಸಲು ಸಲ್ಮಾನ್ ನಿರ್ಧರಿಸಿದ್ದಾರೆ. ಹಾಗಾಗಿ ದೃಶ್ಯ ಅಥವಾ ಫೋಟೊಗಳು ಲೀಕ್ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ. ಚಿತ್ರ ಡಿಸೆಂಬರ್ 20ರಂದು ತೆರೆ ಕಾಣಲಿದೆ.