ಬುಧವಾರ, ಮಾರ್ಚ್ 29, 2023
28 °C

ತಾಯಿ, ಮಗಳೊಂದಿಗೆ ಭಾರತ ಸುತ್ತಬೇಕು: ಹಾಲಿವುಡ್‌ ನಟಿ ಸಲ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ವೆಲ್ ಸರಣಿಯ ’ಎಟರ್ನಲ್‌’ ಸಿನಿಮಾದ ನಟಿ ಸಲ್ಮಾ ಹಯೆಕ್‌ ಅವರು ಮಗಳು ಮತ್ತು ತಾಯಿ ಜೊತೆ ಭಾರತವನ್ನು ಸುತ್ತಬೇಕು ಎಂದು ಹೇಳಿದ್ದಾರೆ.

ಹಾಲಿವುಡ್‌ನ ಮಾರ್ವೆಲ್ ಸರಣಿಯ ’ಎಟರ್ನಲ್‌’ ಸಿನಿಮಾ ನವೆಂಬರ್‌ 5ರಂದು ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ’ಇಂಡಿಯಾ ಟುಡೆ’ ಸುದ್ದಿ ವಾಹಿನಿಯಲ್ಲಿ ಮಾತನಾಡಿರುವ ಸಲ್ಮಾ ಅವರು, ತಾಯಿ ಮತ್ತು ಮಗಳೊಂದಿಗೆ ಭಾರತವನ್ನು ಸುತ್ತಬೇಕು ಎಂದು ಹೇಳಿದ್ದಾರೆ.

ಸಿನಿಮಾದ ಪ್ರಚಾರಕ್ಕೆ ಮುಂದಿನ ವಾರದಲ್ಲಿ ಭಾರತಕ್ಕೆ ಬರುವುದಾಗಿ ಅವರು ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾ ’ಅಜಾಕ್‌’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಸಿನಿಮಾದಲ್ಲಿ ಪ್ರಧಾನ ಪೋಷಕ ಪಾತ್ರವಾಗಿದೆ. 

ಸೂಪರ್‌ಪವರ್‌ ಮನುಷ್ಯರು ಭೂಮಿಯ ಮೇಲೆ ದಾಳಿ ಮಾಡುವ ದುಷ್ಟಶಕ್ತಿಗಳನ್ನು ಸಂಹಾರ ಮಾಡುವುದೇ ಮಾರ್ವೆಲ್‌ ಸರಣಿ ಸಿನಿಮಾಗಳ ಮುಖ್ಯವಾದ ಕಥಾ ಹಂದರವಾಗಿದೆ.

ಆ್ಯಂಜಲಿನಾ ಜೋಲಿ, ರಿಚರ್ಡ್‌, ಹ್ಯಾರಿಗ್ಟಂನ್, ಸಲ್ಮಾ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೊಹುವಾ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು