ಸೋಮವಾರ, ಜನವರಿ 20, 2020
19 °C

ಕಿಚ್ಚ ಮೂಕವಿಸ್ಮಿತ: ಸುದೀಪ್‌ಗೆ ಸಲ್ಲು ಬಾಯ್‌ ಕೊಟ್ಟ ದುಬಾರಿ ಉಡುಗೊರೆ ಯಾವುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದಬಾಂಗ್‌ 3’ ಸಿನಿಮಾದ ನಾಯಕ ನಟ ಸಲ್ಮಾನ್‌ ಖಾನ್‌ ಅವರು ಸುದೀಪ್‌ ಅವರ ನಿವಾಸಕ್ಕೆ ಅಚ್ಚರಿಯ ಭೇಟಿ ಕೊಟ್ಟು ದುಬಾರಿ ಉಡುಗೊರೆ ನೀಡಿದ್ದಾರೆ.

ಸುದೀಪ ನಿವಾಸಕ್ಕೆ ಭೇಟಿ ನೀಡಿದ ಸಲ್ಮಾನ್‌ ಖಾನ್‌, ದುಬಾರಿ ಬೆಲೆಯ ಬಿಎಂಡಬ್ಯೂ ಎಂ5 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಮಾರುಕಟ್ಟೆ ಬೆಲೆ ಸರಿ ಸುಮಾರು ₹ 1.70 ಕೋಟಿಯಿಂದ ₹ 1.92 ಕೋಟಿ ಇರಲಿದೆ. ಸಲ್ಮಾನ್‌ ಖಾನ್‌ ಉಡುಗೊರೆ ನೀಡಿದ್ದಾರೆ ಎಂದು ಖಚಿತಪಡಿಸಿ ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

‘ಒಳ್ಳೆಯದನ್ನು ಮಾಡಿದರೆ ಖಂಡಿತವಾಗಿಯೂ ಒಳ್ಳೆಯದೇ ಆಗುತ್ತದೆ. ಬಿಎಂಡಬ್ಲ್ಯೂ ಎಂ5 ಕಾರಿನ ಜೊತೆಗೆ ಅವರು ಮನೆಗೆ ಬಂದರು. ನನ್ನ ಮತ್ತು ನಮ್ಮ ಕುಟುಂಬದ ಮೇಲೆ ಪ್ರೀತಿ ತೋರಿಸುತ್ತಿರುವುದಕ್ಕೆ ಧನ್ಯವಾದಗಳು, ನಿಮ್ಮ ಜೊತೆ ಕೆಲಸ ಮಾಡಿರುವುದು ನನ್ನ ಭಾಗ್ಯ ಸರ್‌‘ ಎಂದು ಸುದೀಪ್‌ ಟ್ವೀಟ್ ಮಾಡಿದ್ದಾರೆ. 

‘ದಬಾಂಗ್‌ 3’ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಜೊತೆಗಿನ ಸುದೀಪ್‌ ನಟನೆ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಈ ಸಿನಿಮಾ ಕನ್ನಡಕ್ಕೆ ಡಬ್‌ ಆಗಿತ್ತು. ಸಿನಿಮಾ ಬಿಡುಗಡೆ ಮುನ್ನ ಸುದೀಪ್‌  ‘ಇದು ಕನ್ನಡದ್ದೇ ಸಿನಿಮಾ; ಹಿಂದಿ ಸಿನಿಮಾ ಎಂದು ಭಾವಿಸಬೇಕಿಲ್ಲ’ ಎಂದು ಹೇಳಿದ್ದರು. 

ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ದಬಾಂಗ್‌ 3 ಬಿಡುಗಡೆಯಾಗಿತ್ತು. ಸಲ್ಮಾನ್‌ ಖಾನ್‌ ಇಮೇಜ್‌ ನಡುವೆಯೂ ಹಿಂದಿಯಲ್ಲಿ ಉತ್ತಮ ಪ್ರದರ್ಶನ ಕಾಣಲಿಲ್ಲ. ಆದರೆ ಸುದೀಪ್‌ ಅವರ ನಟನೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು