ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಿಸಿ ಕಾ ಭಾಯ್...ಕಿಸಿ ಕಿ ಜಾನ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಸಲ್ಮಾನ್

Last Updated 27 ಆಗಸ್ಟ್ 2022, 10:11 IST
ಅಕ್ಷರ ಗಾತ್ರ

ಬಾಲಿವುಡ್ ನಟ ಸಲ್ಮಾನ್ ಖಾನ್, ಚಿತ್ರರಂಗಕ್ಕೆ ಪ್ರವೇಶಿಸಿ 34 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಈ ಸಂತೋಷದ ಸಂದರ್ಭದಲ್ಲಿ ತಮ್ಮನ್ನು ಬೆಂಬಲಿಸಿರುವ ಸಿನಿಪ್ರಿಯರಿಗೆ ಧನ್ಯವಾದ ಸಲ್ಲಿಸಲಿರುವ ಸಲ್ಲು, ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.

'ಕಿಸಿ ಕಾ ಭಾಯ್...ಕಿಸಿ ಕಿ ಜಾನ್' ಚಿತ್ರದ ಫಸ್ಟ್ ಲುಕ್ ಅನ್ನು ಸಲ್ಮಾನ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಉದ್ದನೆಯ ಕೂದಲು ಬಿಟ್ಟಿರುವ ಸಲ್ಲು, ಕೂಲಿಂಗ್ ಗ್ಲಾಸ್ ಧರಿಸಿ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಚಿತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಸಲ್ಮಾನ್ ಬಹಿರಂಗಪಡಿಸಿಲ್ಲ. ಆದರೆ ಸಲ್ಮಾನ್ ಹೊಸ ಲುಕ್ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

1988ರಲ್ಲಿ ಬೀವಿ ಹೋ ತೊ ಐಸಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುವ ಸಲ್ಮಾನ್ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಇದನ್ನೂ ಓದಿ:​​​​​​​

1989ರಲ್ಲಿ ಮೈನೆ ಪ್ಯಾರ್ ಕಿಯಾ, 1990ರಲ್ಲಿ ಬಾಘಿ: ಎ ರೆಬೆಲ್ ಆಫ್ ಲವ್, 1991ರಲ್ಲಿ ಪತ್ತರ್ ಕಿ ಪೂಲ್, ಸಾಜನ್, 1994ರಲ್ಲಿ ಹಮ್ ಆಪ್ಕೆ ಹೇ ಕೌನ್, 1995ರಲ್ಲಿ ಕರಣ್ ಅರ್ಜುನ್, 1996ರಲ್ಲಿ ಖಾಮೋಷಿ, 1997ರಲ್ಲಿ ಜುಡ್ವಾ, 1998ರಲ್ಲಿ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ, 1998ರಲ್ಲಿ ಕುಚ್ ಕುಚ್ ಹೋತಾ ಹೇ, 1999ರಲ್ಲಿ ಬೀವಿ ನಂ.1, 2004ರಲ್ಲಿ ಮುಜ್ಸೆ ಶಾದೀ ಕರೋಗಿ, 2005ರಲ್ಲಿ ನೋ ಎಂಟ್ರಿ, 2007ರಲ್ಲಿ ಪಾರ್ಟ್ನರ್, 2009ರಲ್ಲಿ ವಾಂಟೆಡ್, 2010ರಲ್ಲಿ ದಬಾಂಗ್, 2012ರಲ್ಲಿ ಏಕ್ ಥ ಟೈಗರ್, 2014ರಲ್ಲಿ ಕಿಕ್, 2015ರಲ್ಲಿ ಬಜರಂಗ್ ಭಾಯಿಜಾನ್, 2015ರಲ್ಲಿ ಪ್ರೇಮ್ ರತನ್ ಧನ್ ಪಾಯೊ, 2016ರಲ್ಲಿ ಸುಲ್ತಾನ್, 2017ರಲ್ಲಿ ಟೈಗರ್ ಜಿಂದಾ ಹೇ ಮುಂತಾದ ಚಿತ್ರಗಳಲ್ಲಿ ತಮ್ಮ ನಟನೆಗಾಗಿ ಹೆಚ್ಚಿನ ಮನ್ನಣೆಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT