ಮಂಗಳವಾರ, ಜನವರಿ 28, 2020
24 °C

ರೆಮೊ ಸಿನಿಮಾದಲ್ಲಿ ಸಲ್ಮಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ರೇಸ್‌ 3’ ಸಿನಿಮಾದ ಬಳಿಕ, ರೆಮೊ ಡಿಸೋಜಾ ನಿರ್ದೇಶನದ ಡ್ಯಾನ್ಸಿಂಗ್‌ ಡ್ಯಾಡ್‌’ ಎಂಬ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ನಟಿಸಲಿದ್ದಾರೆ.

ಸಲ್ಮಾನ್‌ ಹಾಗೂ ರೆಮೊ ಡಿಸೋಜಾ ಅವರ ‘ರೇಸ್‌ 3’ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಹಿಟ್‌ ಗಳಿಸಿತ್ತು. ಈ ಚಿತ್ರ 2018ರ ಜೂನ್‌ನಲ್ಲಿ ಬಿಡುಗಡೆಯಾಗಿತ್ತು. ಆದರೆ ಆ ಬಳಿಕ ಈ ಜೋಡಿಯ ಯಾವುದೇ ಸಿನಿಮಾ ತೆರೆ ಕಂಡಿಲ್ಲ. ಯಾವುದೇ ಚಿತ್ರಗಳು ಸೆಟ್ಟೇರುವ ಲಕ್ಷಣಗಳು ಕಾಣಿಸುತ್ತಿರಲಿಲ್ಲ. ಅಭಿಮಾನಿಗಳು ಈ ಜೋಡಿಯ ಮುಂದಿನ ಸಿನಿಮಾಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.

ಈಚೆಗೆ ಸಂದರ್ಶನವೊಂದರಲ್ಲಿ ರೆಮೊ ಈ ಬಗ್ಗೆ ಮಾತನಾಡಿದ್ದು, ಭವಿಷ್ಯದಲ್ಲಿ ಹೊಸ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಜೊತೆ ಕೆಲಸ ಮಾಡಲಿದ್ದೇನೆ. ತನ್ನ ನಿರ್ದೇಶನದ ‘ಡಾನ್ಸಿಂಗ್‌ ಡ್ಯಾಡ್‌’ ಎಂದು ಹೆಸರಿಟ್ಟಿರುವ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ನಟಿಸಲಿದ್ದಾರೆ ಎಂಬ ವಿಚಾರವನ್ನು ರೆಮೊ ಬಾಯ್ಬಿಟ್ಟಿದ್ದಾರೆ.

ರೆಮೊ ಅವರು ನಿರ್ದೇಶಿಸಿರುವ ‘ಎಬಿಸಿಡಿ’ ಹಾಗೂ ಆ ಸಿನಿಮಾದ ಸೀಕ್ವೆಲ್‌ ಭಾರಿ ಜನಪ್ರಿಯತೆ ಗಳಿಸಿದೆ. ಹಾಗೇ
‘ರೇಸ್‌ 3’ ₹300 ಕೋಟಿ ಗಳಿಸಿತ್ತು.

‘ನಾನು, ಸಲ್ಮಾನ್‌ ಒಟ್ಟಿಗೆ ಮತ್ತೊಮ್ಮೆ ಸಿನಿಮಾ ‘ಡಾನ್ಸಿಂಗ್‌ ಡ್ಯಾಡ್‌’ ಮಾಡುತ್ತಿದ್ದೇನೆ. ಚಿತ್ರಕತೆ ಸಿದ್ಧವಾಗಿದೆ. ಸಲ್ಮಾನ್ ಖಾನ್‌ ಅವರಿಗೆ ಯಾವಾಗ ಸಿನಿಮಾ ಕೆಲಸದಿಂದ ಬಿಡುವು ಸಿಗುತ್ತದೋ ಆಗ ಆ ಸಿನಿಮಾವನ್ನು ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.

‘ರೇಸ್‌ 3’ ಬಗ್ಗೆ ಮಾತನಾಡಿದ ಅವರು, ‘ಸಲ್ಮಾನ್‌ ಖಾನ್‌ ಆ ಸಿನಿಮಾ ನಿರ್ದೇಶನಕ್ಕೆ ನನ್ನನ್ನು ಆಯ್ಕೆ ಮಾಡಿದ್ದು ತುಂಬಾ ಖುಷಿ ಸಂಗತಿ. ಆ ಸಿನಿಮಾಕ್ಕೆ ಉತ್ತಮ ವಿಮರ್ಶೆಯನ್ನು ನಾನು ನಿರೀಕ್ಷಿಸಿದ್ದೆ. ಆದರೆ ಹಾಗಾಗಲಿಲ್ಲ. ಮುಂದಿನ ಸಿನಿಮಾದಲ್ಲಿ ಆ ಆಶಾವಾದ ಇರುತ್ತದೆ’ ಎಂದು ಹೇಳಿದ್ದಾರೆ.

 ಸದ್ಯ ರೆಮೊ ಡಿಸೋಜಾ ಅವರು ತಮ್ಮ ಬಹುನಿರೀಕ್ಷಿತ ‘ಸ್ಟ್ರೀಟ್‌ ಡಾನ್ಸರ್‌ ತ್ರೀಡಿ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಸುದೀಪ್‌–ಸಲ್ಮಾನ್ ಖಾನ್‌| ನಾಲ್ಕೇ ದಿನಕ್ಕೆ ₹ 3 ಕೋಟಿ ಬಾಚಿದ ಕನ್ನಡದ ದಬಾಂಗ್–3

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು