ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಬಾಂಗ್‌’ ಸೆಟ್‌ನಲ್ಲಿ ಸಲ್ಮಾನ್‌– ಸಾಯಿ

Last Updated 24 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

‘ದಬಾಂಗ್‌ 3’ ಸಿನಿಮಾ ಸೆಟ್‌ನಿಂದ ಮೊದಲ ಬಾರಿಗೆ ಫೋಟೊವೊಂದನ್ನು ನಟ ಸಲ್ಮಾನ್‌ ಖಾನ್‌ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಹಿಂದೆ ಚಿತ್ರೀಕರಣ ದೃಶ್ಯಗಳು, ಹಾಡಿನ ದೃಶ್ಯಗಳು ಅಭಿಮಾನಿಗಳಿಂದ ಲೀಕ್‌ ಆಗಿದ್ದವು.

ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಡುತ್ತಿರುವ ಸಾಯಿ ಮಂಜ್ರೇಕರ್‌ ಅವರ ಜೊತೆಗಿರುವ ಫೋಟೊವನ್ನು ಸಲ್ಮಾನ್‌ ಹಂಚಿಕೊಂಡಿದ್ದಾರೆ. ಈ ಚಿತ್ರದ ಬಿಡುಗಡೆಗಾಗಿ ಸಲ್ಮಾನ್‌ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್‌ ಹಾಗೂ ಸಾಯಿ ಜೊತೆಯಾಗಿ ನದಿ ದಂಡೆಯಲ್ಲಿ ನಿಂತಿದ್ದಾರೆ. ಫೋಟೊ ಕೆಳಗೆ ‘ಆನ್‌ ಲೋಕೆಶನ್‌... ದಬಾಂಗ್‌ 3’ ಎಂದು ಸಲ್ಮಾನ್‌ ಅಡಿಶೀರ್ಷಿಕೆ ಕೊಟ್ಟಿದ್ದಾರೆ.

ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಪ್ರೇಮಿಯಾಗಿ ಸಾಯಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಅರ್ಬಾಜ್‌ ಖಾನ್‌ ಕೂಡ ನಟಿಸಿದ್ದಾರೆ. ಈ ಚಿತ್ರವು ಡಿಸೆಂಬರ್‌ನಲ್ಲಿ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT