ಬುಧವಾರ, ನವೆಂಬರ್ 13, 2019
28 °C

ಕನ್ನಡಕ್ಕೆ ಬಂದ ಸಲ್ಮಾನ್‌ ಖಾನ್!

Published:
Updated:

ಪ್ರಭುದೇವ ನಿರ್ದೇಶನದ ಸಲ್ಮಾನ್‌ ಖಾನ್‌ ನಟನೆಯ ‘ದಬಾಂಗ್‌ 3’ ಚಿತ್ರ ನಾಲ್ಕು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಸಲ್ಲು ವಿರುದ್ಧ ತೊಡೆ ತಟ್ಟಿರುವುದು ನಟ ಸುದೀಪ್. ಡಿಸೆಂಬರ್‌ 20ರಂದು ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಬಿಗ್‌ ಬಜೆಟ್‌ನ ಈ ಸಿನಿಮಾದ ಮೇಲೆ ಸಲ್ಲು ಮತ್ತು ಕಿಚ್ಚನ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ.

ನಾಲ್ಕೂ ಭಾಷೆಯಲ್ಲಿ ‘ದಬಾಂಗ್‌ 3’ ಚಿತ್ರದ ಮೋಷನ್‌ ಪೋಸ್ಟರ್‌ ಇಂದು ಬಿಡುಗಡೆಯಾಗಿದೆ. ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸಲ್ಮಾನ್‌ ಖಾನ್ ‘ಟೈಮೂ ನಂದೂ... ತಾರೀಕೂ ನಂದೂ...’ ಎಂದು ಕನ್ನಡದಲ್ಲಿ ಡೈಲಾಗ್‌ ಹೊಡೆದಿದ್ದಾರೆ. ಈ ಡೈಲಾಗ್‌ಗೆ ಸಲ್ಲು ಅಭಿಮಾನಿಗಳು ಫಿದಾ ಆಗಿದ್ದಾರೆ.  

ಪ್ರತಿಕ್ರಿಯಿಸಿ (+)