ಸಲ್ಮಾನ್ ಜೊತೆ ನಾನು ಡೇಟಿಂಗ್ ಮಾಡಿಲ್ಲ: ಶಿಲ್ಪಾಶೆಟ್ಟಿ

7

ಸಲ್ಮಾನ್ ಜೊತೆ ನಾನು ಡೇಟಿಂಗ್ ಮಾಡಿಲ್ಲ: ಶಿಲ್ಪಾಶೆಟ್ಟಿ

Published:
Updated:

ಬಾಲಿವುಡ್‌ನ ದಿ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಯಾರಪ್ಪ ಎಂದರೆ ಥಟ್ಟನೆ ನೆನಪಾಗುವುದು ಸಲ್ಮಾನ್ ಖಾನ್. 52 ರ ಈ ಸುಂದರ, ಇನ್ನು ಯಾವಾಗ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿರುವಾಗಲೇ ಅವರ ಕುರಿತ ಗಾಸಿಪ್ ಬಾಲಿವುಡ್‌ನಲ್ಲಿ ಬಿಸಿಬಿಸಿಯಾಗಿ ಸದ್ದು ಮಾಡುತ್ತಿದೆ.

ಐಶ್ವರ್ಯಾ ರೈ ಜೊತೆಗಿನ ಪ್ರೀತಿ ಬ್ರೇಕಪ್ ಆದ ಬಳಿಕ ಸಲ್ಮಾನ್ ಒಂಟಿಯಾಗಿದ್ದರು. ಅದೇ ಸಂದರ್ಭದಲ್ಲಿ ಅವರ ಬಾಳಿಗೆ ಶಿಲ್ಪಾಶೆಟ್ಟಿ ಹೆಜ್ಜೆಯಿಟ್ಟರಂತೆ. ಸಲ್ಮಾನ್ ಹಾಗೂ ಶಿಲ್ಪಾ ಇಬ್ಬರು ಡೇಟಿಂಗ್‌ನಲ್ಲಿದ್ದರಂತೆ. ಹಾಗಂತ ಬಾಲಿವುಡ್ ತುಂಬಾ ಗುಲ್ಲೆದ್ದಿದೆ.

ಈ ಗಾಸಿಪ್ ಕಿವಿಗೆ ಬಿದ್ದ ಕೂಡಲೇ ಶಿಲ್ಪಾ ಕೆಂಡಾಮಂಡಲರಾಗಿದ್ದರಂತೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದರುವ ಅವರು, ‘ಸಲ್ಮಾನ್ ಹಾಗೂ ನಾನು ಸ್ನೇಹಿತರು. ನಮ್ಮಿಬ್ಬರ ನಡುವೆ ಸ್ನೇಹಕ್ಕೆ ಮೀರಿದ ಸಂಬಂಧವಿಲ್ಲ. ನಾವಿಬ್ಬರು ಡೇಟಿಂಗ್ ಸಹ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ನಟ-ನಟಿಯರ ನಡುವೆ ಆತ್ಮೀಯವಾದ ಅನುಬಂಧ ಇರುತ್ತದೆ. ನನ್ನ ಹಾಗೂ ಸಲ್ಮಾನ್ ನಂಟು ಅದೇ ರೀತಿಯದ್ದು. ಅವರೊಂದಿಗೆ ನಾನು ಡೇಟಿಂಗ್ ಮಾಡಿಲ್ಲ. ಅವರು ತುಂಬಾ ಒಳ್ಳೆಯ ವ್ಯಕ್ತಿತ್ವದವರು’ ಎಂದು ಹೊಗಳಿದ್ದಾರೆ.

ಸಲ್ಮಾನ್ ನನ್ನ ಮನೆಗೆ ಎಷ್ಟೋ ಬಾರಿ ಮಧ್ಯರಾತ್ರಿ ಬಂದಿದ್ದಾರೆ. ನಾನೂ ಅವರೊಂದಿಗೆ ಹರಟೆ ಹೊಡೆದಿದ್ದೇನೆ. ಕೆಲವೊಮ್ಮೆ ನಾನು ಮಲಗಿದ್ದಾಗ, ಸಲ್ಮಾನ್ ನನ್ನ ತಂದೆಯೊಂದಿಗೆ ಡ್ರಿಂಕ್ಸ್ ಮಾಡಿ ಹೋಗುತ್ತಿದ್ದರು. ನನ್ನಪ್ಪ ಮೃತಪಟ್ಟಾಗ, ಅವರಿಬ್ಬರು ಡ್ರಿಂಕ್ಸ್ ಮಾಡುತ್ತಿದ್ದ ಟೇಬಲ್ ಬಳಿ ಕುಳಿತು ಕಣ್ಣೀರು ಹಾಕಿದ್ದು ನನಗೆ ನೆನಪಿದೆ’ ಎಂದಿದ್ದಾರೆ.

ಸಲ್ಮಾನ್ ಖಾನ್ ಸದ್ಯ ಭಾರತ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅದರ ಜೊತೆಗೆ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನೂ ಅವರು ಮಾಡುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಉದ್ಯಮಿ ರಾಜ್‌ಕುಂದ್ರಾ ಅವರ ಜೊತೆ ವಿವಾಹವಾಗಿದ್ದು, ಅವರಿಗೆ ವಿಯಾನ್ ಎಂಬ ಮಗನಿದ್ದಾನೆ.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !