ಶನಿವಾರ, ಮಾರ್ಚ್ 6, 2021
32 °C

‘ಸಾಲ್ಟ್‌’ಗೆ ಕುಂಬಳಕಾಯಿ ಮಿಕ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸಾಲ್ಟ್‌’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೆ ಕೊನೆಗೊಂಡಿದೆ. ಕೊನೆಗೂ ಈ ‘ಸಾಲ್ಟ್‌’ ಮುಕ್ತಾಯದ ದಿನ ಬರೋಬ್ಬರಿ 16 ಕೆಜಿ ತೂಕದ ಕುಂಬಳಕಾಯಿ ಒಡೆದು ಚಿತ್ರೀಕರಣಕ್ಕೆ ಮುಕ್ತಾಯ ಹಾಡಲಾಯಿತು. ಬೃಹತ್‌ ಗಾತ್ರದ ಕುಂಬಳಕಾಯಿಯನ್ನು ಇಬ್ಬರು ಎತ್ತಿಕೊಂಡು ಒಡೆಯಬೇಕಾಯಿತಂತೆ.

ಚಿತ್ರದ ಬಗ್ಗೆ ನಿರ್ಮಾಪಕಿ ಶಾಲಿನಿ.ಎಂ. ಮಾತನಾಡಿ, ‘ನಮ್ಮ ಚಿತ್ರದ ಶೀರ್ಷಿಕೆ ವಿನೂತನವಾಗಿದೆ. ಅದರಂತೆ ಏನಾದರೂ ಹೊಸ ರೀತಿ ಪ್ರಯೋಗ ಮಾಡಬೇಕೆಂದು ಚಿಂತನೆ ಕಾಡಿತ್ತು. ಇಲ್ಲಿಯವರೆಗೂ ಯಾರೂ ನೋಡಿರದ ಬೃಹದಾಕಾರದ ಕುಂಬಳಕಾಯಿ ಒಡೆದರೆ ಹೇಗಿರುತ್ತದೆಂದು ತಂಡದೊಂದಿಗೆ ಚರ್ಚಿಸಲಾಯಿತು. ಎಲ್ಲರೂ ಚೆನ್ನಾಗಿದೆ ಅಂತ ಹುರಿದುಂಬಿಸಿದರು. ಕೊನೆಗೆ ಎಲ್ಲಾ ಕಡೆಗಳಲ್ಲಿ ಹುಡುಕಿ ಹೊಸದುರ್ಗದ ರೈತ ರಾಜುಅವಳಿಪಾಳ್ಯ ಅವರ ಬಳಿ ಇರುವುದನ್ನು ತಿಳಿದು ತಂದೆವು’ ಎಂದರು.

‘ಅಡುಗೆಗೆ ಉಪ್ಪು ಎಷ್ಟು ಮುಖ್ಯವೋ, ಜೀವನದಲ್ಲಿ ‘ಸಾಲ್ಟ್’ ಅವಶ್ಯಕವೆಂದು ಸಾರುವ ಕತೆ ಇದಾಗಿದೆ. ರಚನೆ, ನಿರ್ದೇಶನ ಮಾಡಿರುವ ಭರತ್‌ನಂದ ಬಣ್ಣ ಹಚ್ಚಿದ್ದಾರೆ. ಅವರೊಂದಿಗೆ ಚೇತನ್‌ಕುಮಾರ್, ಚಂದ್ರುಛತ್ರಪತಿ, ಸತೀಶ್‌ಮಳವಳ್ಳಿ ಇದ್ದಾರೆ. ತಾರಗಣದಲ್ಲಿ ಬಾಲರಾಜ್‌ವಾಡಿ, ಸಂದೀಪ್, ವಿಜಯಶ್ರೀ ಕಲಬುರಗಿ, ಯಶಸ್ವಿನಿ ಶೆಟ್ಟಿ, ರಶ್ಮಿತಾ ಗೌಡ, ಸುರ್ಯೋದಯ್‌ ಪೆರಂಪಳ್ಳಿ, ಚಕ್ರವರ್ತಿ ದಾವಣಗೆರೆ, ಹರ್ಷ ಇದ್ದಾರೆ. ರಾಘವೇಂದ್ರ ಕಾಮತ್ ಅವರ ಸಾಹಿತ್ಯದ ನಾಲ್ಕು ಹಾಡುಗಳಿಗೆ ಯಲಸ್ಟಿನ್-ಯಧುನಂದನ್ ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ.

ಛಾಯಾಗ್ರಹಣ ಸಂತೋಷ್‌ ದಯಾಲನ್, ಸಂಕಲನ ವಿನಯ್‌ಕುಮಾರ, ನೃತ್ಯ ಮದುಸುಧನ್, ಸಂಭಾಷಣೆ ಸತೀಶ್‌ಮಳವಳ್ಳಿ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ರಾಜರತ್ನ ಸ್ಟುಡಿಯೋ ಮೂಲಕ ಸಿದ್ದಗೊಂಡಿರುವ ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ  ನಿರತವಾಗಿದೆ’ ಎಂದು ಹೇಳಿದರು.

ಇದನ್ನೂ ಓದಿ: 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು