ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಟಾಗ್ರಾಂನಿಂದ ಹಣ ಗಳಿಸಿದ ಸಮಂತಾ ಹಾಗೂ ಮಹೇಶ್‌

Last Updated 29 ಜೂನ್ 2020, 11:41 IST
ಅಕ್ಷರ ಗಾತ್ರ

ಸಿನಿಮಾ ಸೆಲೆಬ್ರಿಟಿಗಳು ಸಿನಿಮಾಗಳಲ್ಲಿ ನಟಿಸುವ ಮೂಲಕ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ, ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗುವ ಮೂಲಕ ಹಣ ಗಳಿಸುತ್ತಾರೆ. ಆದರೆ ಈಗ ಇನ್‌ಸ್ಟಾಗ್ರಾಂನಿಂದಲೂ ಹಣ ಗಳಿಸುತ್ತಿದ್ದಾರೆ ಎಂದರೆ ನಂಬಲೇಬೇಕು. ಹಣ ಗಳಿಸಲು ಇನ್‌ಸ್ಟಾಗ್ರಾಂ ಸೆಲೆಬ್ರಿಟಿಗಳಿಗೆ ಹೊಸ ವೇದಿಕೆಯಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್‌ಗಳು ಹೆಚ್ಚಿದಷ್ಟು ಹೆಚ್ಚು ಸಂಪಾದನೆ ಮಾಡಬಹುದು. ಈಗ ಈ ಟ್ರೆಂಡ್‌ ಭಾರತದಲ್ಲೂ ಆರಂಭವಾಗಿದೆ. ಅದಕ್ಕೆ ಪ್ರತಿಯಾಗಿ ಟಾಲಿವುಡ್‌ ನಟ ಮಹೇಶ್ ಬಾಬು ಹಾಗೂ ಸಮಂತಾ ವಾಷಿಂಗ್ ಪೌಡರ್ ಬ್ರ್ಯಾಂಡ್‌ವೊಂದನ್ನು ಉತ್ತೇಜಿಸುವಂತಹ ಫೋಟೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಟ–ನಟಿಯರು ಇನ್‌ಸ್ಟಾಗ್ರಾಂ ಜಾಲತಾಣಕ್ಕೆ ಹೆಚ್ಚು ವ್ಯಸನಿಗಳಾಗಿದ್ದಾರೆ. ಪ್ರತಿದಿನ ಇನ್‌ಸ್ಟಾದಲ್ಲಿ ಕ್ರಿಯಾಶೀಲರಾಗಿರುವ ಮೂಲಕ ಹೆಚ್ಚು ಹೆಚ್ಚು ಫಾಲೋವರ್ಸ್‌ಗಳನ್ನು ಪಡೆಯುತ್ತಿದ್ದಾರೆ. ಸದಾ ಮೆಸೇಜ್‌ಗಳು, ಫೋಟೊ ಹಾಗೂ ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆ ಮೂಲಕ ತಮ್ಮ ಉಪಸ್ಥಿತಿಯನ್ನು ತೋರುತ್ತಿದ್ದಾರೆ.

ಕೊರೊನಾ ಲಾಕ್‌ಡೌನ್‌ ದಿನಗಳಲ್ಲಿ ಅನೇಕ ಸೆಲೆಬ್ರಿಟಿಗಳು ಇನ್‌ಸ್ಟಾಗ್ರಾಂನಲ್ಲಿ ಬ್ರ್ಯಾಂಡ್‌ಗಳನ್ನು ಉತ್ತೇಜಿಸುವ ಮೂಲಕ ಹಣ ಗಳಿಸುತ್ತಿದ್ದಾರೆ. ತಮ್ಮ ತಮ್ಮ ಬ್ರ್ಯಾಂಡ್‌ಗಳಿಗೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳು ಮಾಡಿದ ಪೋಸ್ಟ್‌ಗೆ ಲಕ್ಷಾಂತರ ರೂಪಾಯಿ ನೀಡುತ್ತಿವೆ ಕಂಪನಿಗಳು.

ನಟ ಮಹೇಶ್ ಬಾಬು ಅನೇಕ ಖಾಸಗಿ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಜೊತೆಗೆ ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದಾರೆ. ಆ ಮೂಲಕ ಸಿನಿಮಾ‌ದೊಂದಿಗೆ ಇದರಲ್ಲೂ ಹಣ ಗಳಿಸುತ್ತಿದ್ದಾರೆ. ಈಗ ಇನ್‌ಸ್ಟಾಗ್ರಾಂ ವೇದಿಕೆ ಕೂಡ ಅವರ ಗಳಿಕೆಯ ಮೊತ್ತವನ್ನು ಹೆಚ್ಚಿಸುತ್ತಿದೆ.

ಭಾನುವಾರ (ಜೂನ್ 28) ಮಹೇಶ್ ತಮ್ಮ ಪತ್ನಿ ನಮೃತಾ ಜೊತೆ ವಾಷಿಂಗ್ ಪೌಡರ್‌ಗೆ ಸಂಬಂಧಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ತಮ್ಮ ಮನೆಯ ವಾಷಿಂಗ್ ಮಷಿನ್ ಮುಂದೆ ಬರ್ಮುಡಾ ಚಡ್ಡಿ ಹಾಗೂ ಟೀ ಶರ್ಟ್ ಧರಿಸಿ ನಿಂತಿದ್ದರು ಮಹೇಶ್. ಪಕ್ಕದಲ್ಲಿ ನಿಂತಿದ್ದ ನಮೃತಾ ಕೈಯಲ್ಲಿ ವಾಷಿಂಗ್ ಪೌಡರ್ ಕವರ್‌ ಅನ್ನು ಹಿಡಿದಿದ್ದರು.ಮಹೇಶ್ ಹಾಗೂ ನಮೃತಾ ದಂಪತಿ ಇನ್‌ಸ್ಟಾಗ್ರಾಂನಲ್ಲಿ 7ಮಿಲಿಯನ್‌ ಫಾಲೋವರ್ಸ್ ಹೊಂದಿದ್ದಾರೆ.

ನಟಿ ಸಮಂತಾ ಕೂಡ ತಮ್ಮ ಪತಿ ನಾಗಚೈತನ್ಯ ಜೊತೆ ಇದೆ ಬ್ರ್ಯಾಂಡ್‌ನ ವಾಷಿಂಗ್ ಪೌಡರ್ ಹಿಡಿದು ನಿಂತಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.

ಸಮಂತಾ ಇನ್‌ಸ್ಟಾಗ್ರಾಂನಲ್ಲಿ 10 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಪತಿ ನಾಗಚೈತನ್ಯ 8 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT