ಮಹಿಳಾ ಪ್ರಧಾನ ಚಿತ್ರದಲ್ಲಿ ಸಮಂತಾ

7

ಮಹಿಳಾ ಪ್ರಧಾನ ಚಿತ್ರದಲ್ಲಿ ಸಮಂತಾ

Published:
Updated:

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಇತ್ತೀಚೆಗೆ ಮಹಿಳಾ ಕೇಂದ್ರಿತ ಚಿತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಅವರು ಈಚೆಗೆ ಮುಖ್ಯಪಾತ್ರಗಳಲ್ಲಿ ನಟಿಸಿರುವ ‘ರಂಗಸ್ಥಲಂ’, ‘ಮಹಾನಟಿ’, ‘ಅಭಿಮನ್ಯುಡು’ ಚಿತ್ರಗಳು ಬ್ಲಾಕ್‌ಬಸ್ಟರ್‌ ಹಿಟ್‌ ಗಳಿಸಿತ್ತು. ಈಗ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಅವರು ನಟಿಸಲಿದ್ದಾರೆ.

ಸದ್ಯ ಕನ್ನಡದ ‘ಯೂ– ಟರ್ನ್‌’ ರಿಮೇಕ್‌ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಮಂತಾ, ಮತ್ತೊಂದು ಮಹಿಳಾ ಪ್ರಧಾನ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ತೆಲುಗು ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ‘ಅರ್ಜುನ್‌ ರೆಡ್ಡಿ’ ಚಿತ್ರದಲ್ಲಿ ಅಸೋಸಿಯೇಟ್‌ ನಿರ್ದೇಶಕರಾಗಿ ಕೆಲಸ ಮಾಡಿದ್ದ ಗಿರಿಸಯ್ಯ ಎಂಬವರು ನಟಿ ಸಮಂತಾಗೆ ಹೊಸ ಚಿತ್ರದ ಕತೆ ಹೇಳಿದ್ದು, ಇದನ್ನು ಸಮಂತಾ ಒಪ್ಪಿದ್ದಾರೆ ಎನ್ನಲಾಗಿದೆ.  ಸಿನಿಮಾದ ಆರಂಭದ ಕತೆಯನ್ನೂ ಕೇಳಿಯೇ ಸಮಂತಾ ಸಿನಿಮಾಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !