ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಂತಾ ಸಂಭಾವನೆ ₹2 ಕೋಟಿ

Last Updated 29 ಜುಲೈ 2019, 19:45 IST
ಅಕ್ಷರ ಗಾತ್ರ

‘ಓ ಬೇಬಿ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ನಟಿ ಸಮಂತಾ ಸಂಭಾವನೆ ಹೆಚ್ಚಾಗಿದೆ.

ಈಚೆಗೆ ಈ ನಟಿ ನಟಿಸಿರುವ ‘ಯೂಟರ್ನ್‌’, ‘ಸೂಪರ್‌ ಡಿಲಕ್ಸ್‌’, ‘ಮಜಿಲಿ’ ಚಿತ್ರಗಳು ಒಂದರ ಹಿಂದೆ ಒಂದರಂತೆ ಬಾಕ್ಸ್‌ ಆಫೀಸಿನಲ್ಲಿ ಯಶಸ್ಸು ಗಳಿಸಿವೆ. ‘ಓ ಬೇಬಿ’ ಸಿನಿಮಾವನ್ನು ಎಲ್ಲಾ ವರ್ಗದ ಪ್ರೇಕ್ಷಕರು ಇಷ್ಟಪಟ್ಟಿದ್ದು, ವಿಶ್ವದಾದ್ಯಂತ ₹50 ಕೋಟಿ ಗಳಿಸಿದೆ.

ಮೂಲಗಳ ಪ್ರಕಾರ ‘ಓ ಬೇಬಿ’ ಸಿನಿಮಾದ ನಂತರ ಸಮಂತಾ ತಮ್ಮ ಸಂಭಾವನೆಯನ್ನು ಭಾರಿ ಹೆಚ್ಚಿಸಿಕೊಂಡಿದ್ದಾರೆ. ಈ ಹಿಂದೆ ₹1 ಕೋಟಿ ಸಂಭಾವನೆ ಪಡೆಯುತ್ತಿದ್ದ ಸಮಂತಾ ಈಚೆಗೆ ಸಹಿ ಮಾಡಿದ ಸಿನಿಮಾಕ್ಕೆ ₹2 ಕೋಟಿ ಸಂಭಾವನೆ ಪಡೆದಿದ್ದಾರಂತೆ.

ದಕ್ಷಿಣ ಭಾರತದ ನಟಿಯರಲ್ಲಿ ಕೋಟಿ ಸಂಭಾವನೆ ಪಡೆಯುವ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಈ ಪಟ್ಟಿಯಲ್ಲಿ ನಯನತಾರಾ ಹೆಸರು ಮೊದಲಿದ್ದು, ಅವರು ₹ 5 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ಸದ್ಯ ಸಮಂತಾ ‘96’ ತೆಲುಗು ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT