ನಟಿ ಸಮಂತಾ ರುತ್ ಪ್ರಭು ಹಾಗೂ ಕನ್ನಡದ ದಿಗಂತ್ ಮಂಚಾಲೆ ಅವರು ಜೋಡಿಯಾಗಿ ನಟಿಸಿರುವ ‘ಮಾ ಇಂಟಿ ಬಂಗಾರಂ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ಅನಸೂಯ ಪಾತ್ರಕ್ಕೆ ಸಮಂತಾ ಅವರು ಬಣ್ಣಹಚ್ಚಿದ್ದಾರೆ. ಅನಸೂಯ ಸಂಪ್ರದಾಯಸ್ಥ ಕುಟುಂಬದ ಹುಡುಗನ ಜೊತೆ ವಿವಾಹ ಆಗುತ್ತಾಳೆ. ಆರಂಭದಲ್ಲಿ ಅವಳು ಎಲ್ಲ ಕಷ್ಟವನ್ನು ಸಹಿಸಿಕೊಂಡು ಹೋಗುತ್ತಿರುತ್ತಾಳೆ. ಆದರೆ ತನ್ನ ಕುಟುಂಬಕ್ಕೆ ಆಪತ್ತು ಬಂದಾಗ ಆಕೆಯೇ ಮುಂದೆ ನಿಂತು ಹೋರಾಡುವುದನ್ನು ಈ ಟ್ರೇಲರ್ನಲ್ಲಿ ಕಾಣಬಹುದು.

ಸಂಪ್ರದಾಯಸ್ಥ ಕುಟುಂಬದ ಹುಡುಗನ ಪಾತ್ರದಲ್ಲಿ ನಟ ದಿಗಂತ್ ನಟಿಸಿದ್ದರೆ, ಸಮಂತಾ ಅವರು ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ.

ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರವನ್ನು ಸಮಂತಾ ರುತ್ ಪ್ರಭು, ರಾಜ್ ನಿದಿಮೋರು, ಹಿಮಾಂಕ್ ಅವರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾವು ಜೂನ್ 19 ರಂದು ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ.

‘ಕಾಂತಾರ ಅಧ್ಯಾಯ–2’ ಚಿತ್ರದ ಮೂಲಕ ಪ್ರಸಿದ್ಧಿ ಪಡೆದ ನಟ ಗುಲ್ಶನ್ ದೇವಯ್ಯ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.