ಸೋಮವಾರ, ಮಾರ್ಚ್ 27, 2023
32 °C

ಎನ್‌ಜಿಒಗಳಿಗೆ ದಾನ ನೀಡಿದ ಸಮಂತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ ಬೆಡಗಿ ಸಮಂತಾ ಅಕ್ಕಿನೇನಿ ಮೊದಲಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಿದ್ದರು. ಫೇಸ್‌ಬುಕ್‌, ಇನ್ಸ್‌ಸ್ಟಾಗ್ರಾಂ, ಟ್ವಿಟರ್‌ಗಳಲ್ಲಿ ಇವರು ಅಭಿಮಾನಿಗಳಿಗೆ ಸ್ಪಂದಿಸುತ್ತಾರೆ. ಕೊರೊನಾ ಬಿಕ್ಕಟ್ಟಿನಲ್ಲೂ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದರು. 

ಇನ್ಸ್‌ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯರಾಗಿರುವ ಈ ಬೆಡಗಿ ಇತ್ತೀಚೆಗೆ 10 ಮಿಲಿಯನ್‌‌ ಫಾಲೋವರ್ಸ್‌ಗಳನ್ನು ಪಡೆದಿದ್ದಾರೆ. ಈ ಖುಷಿಯನ್ನು ಅವರು ವಿಭಿನ್ನವಾಗಿ ಆಚರಿಸಿದ್ದಾರೆ. ಹತ್ತು ಎನ್‌ಜಿಒಗಳಿಗೆ ಅಗತ್ಯ ವಸ್ತುಗಳನ್ನು ದಾನ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಆ ಮೂಲಕ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರಿಗೆ ನೆರವಾಗಿದ್ದಾರೆ.

ಫೆಬ್ರುವರಿಯಲ್ಲಿ ಬಿಡುಗಡೆಯಾದ ಇವರ ‘ಜಾನು’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತಿತ್ತು. ಆದರೂ ವೈಯಕ್ತಿಕವಾಗಿ ಸಮಂತಾ ಈ ಚಿತ್ರವನ್ನು ತುಂಬಾನೇ ಮೆಚ್ಚಿಕೊಂಡಿದ್ದರು. ತಮಿಳಿನ ‘96’ ಚಿತ್ರದ ರಿಮೇಕ್ ಆಗಿದ್ದ ಜಾನು ಚಿತ್ರದಲ್ಲಿ ಸಮಂತಾ ನಟಿಸಬೇಕೆಂಬುದು ದಿಲ್‌ರಾಜು ಅವರ ಕೋರಿಕೆಯಾಗಿತ್ತಂತೆ. ತಮಿಳಿನಲ್ಲಿ ತ್ರಿಷಾ ಕೃಷ್ಣನ್‌ ನಟಿಸಿದ್ದ ಪಾತ್ರಕ್ಕೆ ಇವರು ಬಣ್ಣ ಹಚ್ಚಿದ್ದರು. ಸಮಂತಾ ಈ ಪಾತ್ರಕ್ಕೆ ನ್ಯಾಯ ಒದಗಿಸಿದ್ದರೂ ಈ ಚಿತ್ರ ಥಿಯೇಟರ್‌ನಲ್ಲಿ ಹಿಟ್ ಕಾಣಲಿಲ್ಲ. ಅದೇನೆ ಇದ್ದರೂ ಸಿನಿರಂಗದಲ್ಲಿ ಇವರಿಗೆ ಬೇಡಿಕೆ ಕಡಿಮೆಯಾಗಲಿಲ್ಲ.

ಸದ್ಯಕ್ಕೆ ಸಮಂತಾ ಕೈಯಲ್ಲಿ ಎರಡು ತಮಿಳು ಸಿನಿಮಾಗಳಿದ್ದು, ಮೊದಲನೆಯದ್ದು ವಿಘ್ನೇಶ್ ಶಿವನ್ ನಿರ್ದೇಶನದ ‘ಕಾಟು ವಾಕುಲ ರೆಂಡು ಕಾದಲ್’‌. ಇದರಲ್ಲಿ ನಯನತಾರಾ ಹಾಗೂ ವಿಜಯ್‌ ಸೇತುಪತಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಸಮಂತಾ. ಇನ್ನೊಂದು ಹೊಸ ನಿರ್ದೇಶಕರ ಚಿತ್ರದಲ್ಲಿ ಉದಯೋನ್ಮುಖ ನಟ ಪ್ರಶಾಂತ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೇ ನಿರ್ದೇಶಕಿ ನಂದಿನಿ ರೆಡ್ಡಿ ಅವರ ಚಿತ್ರದಲ್ಲೂ ಸಮಂತಾ ನಟಿಸುವ ಕುರಿತು ಮಾತುಕತೆ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು