ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಚೇದನದ ಬಳಿಕ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ನಟಿ ಸಮಂತಾ ಹೇಳಿದ್ದೇನು?

Last Updated 10 ಜನವರಿ 2022, 7:02 IST
ಅಕ್ಷರ ಗಾತ್ರ

ನಟಿ ಸಮಂತಾ ರುತ್ ಪ್ರಭು ಅವರು ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಮಾತನಾಡಿದ್ದು, ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ತಾವು ನಡೆಸಿದ ಹೋರಾಟ ಕುರಿತು ವಿವರಿಸಿದ್ದಾರೆ.

ರೋಶಿನಿ ಟ್ರಸ್ಟ್ ಮತ್ತು ದಾಟ್ಲಾ ಫೌಂಡೇಶನ್‌ನ 'ನಿಮ್ಮ ಮನೆ ಬಾಗಿಲಿಗೆ ಮನೋವೈದ್ಯಕೀಯ' ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಂತಾ, ತಮ್ಮ ಖಾಸಗಿ ಜೀವನದಲ್ಲಿ ತಮಗೆ ಉಂಟಾಗಿರುವ ಸಮಸ್ಯೆಗಳನ್ನು ಹೇಗೆ ನಿಭಾಯಿಸಿದ್ದಾರೆ ಎಂಬುದನ್ನು ತಿಳಿಸಿದರು.

ಸಮಾರಂಭದಲ್ಲಿ ಮಾತನಾಡಿದ ಸಮಂತಾ, ತನ್ನ ಮಾನಸಿಕ ಆರೋಗ್ಯದ ಹೋರಾಟಗಳ ಬಗ್ಗೆ ಮತ್ತು ಆ ಸಮಸ್ಯೆಗಳನ್ನು ನಿವಾರಿಸಲು ತನಗೆ ಎಷ್ಟು ಜನರು ಸಹಾಯ ಮಾಡಿದರು ಎಂಬ ಕುರಿತು ಹೇಳಿದರು.

'ನೀವು ಮಾನಸಿಕವಾಗಿ ತೊಂದರೆಗೊಳಗಾದಾಗ ಯಾರಿಂದಲಾದರೂ ಸಹಾಯ ಪಡೆಯಲು ಯಾವುದೇ ನಿರ್ಬಂಧಗಳಿಲ್ಲ. ನನ್ನ ವಿಷಯದಲ್ಲಿ, ನನ್ನ ಸಲಹೆಗಾರರು ಮತ್ತು ಸ್ನೇಹಿತರ ಸಹಾಯದಿಂದ ಮಾತ್ರ ನನ್ನ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ನಾನು ಹೊರಬರಲು ಸಾಧ್ಯವಾಯಿತು' ಎಂದು ಹೇಳಿದರು.

ಮನೋವೈದ್ಯರಿಂದ ಸಹಾಯ ಪಡೆಯುವುದನ್ನು ಕೂಡ ಸಾಮಾನ್ಯ ವಿಷಯವನ್ನಾಗಿ ನೋಡಬೇಕು ಎಂಬ ಅಂಶವನ್ನು ಒತ್ತಿ ಹೇಳಿದ ಅವರು, 'ದೈಹಿಕ ಗಾಯಗಳಿಗೆ ನಾವು ಹೇಗೆ ವೈದ್ಯರ ಬಳಿಗೆ ಹೋಗುತ್ತೇವೆಯೋ ಹಾಗೆಯೇ ನಮ್ಮ ಹೃದಯಕ್ಕೆ ನೋವಾಗಿದ್ದರೆ ನಾವು ಮನೋವೈದ್ಯರನ್ನು ಸಂಪರ್ಕಿಸಬೇಕು' ಎಂದು ಅವರು ಹೇಳಿದರು.

'ನನ್ನ ಜೀವನದ ಮುಂದಿನ ಪಯಣದಲ್ಲಿ ನಾನು ಯಶಸ್ವಿಯಾದರೆ, ಅದು ನಾನು ಬಲಶಾಲಿಯಾಗಿದ್ದ ಕಾರಣದಿಂದಲ್ಲ. ಬದಲಿಗೆ, ನನ್ನ ಸುತ್ತಲಿರುವ ಅನೇಕ ಜನರು ನಾನು ಬಲಶಾಲಿಯಾಗಲು ಸಹಾಯ ಮಾಡಿದ್ದರಿಂದ ಮಾತ್ರ. ಬಹಳಷ್ಟು ಜನರು ಸಹಾಯ ಮಾಡಲು ಸಾಕಷ್ಟು ಸಮಯ ಮತ್ತು ಶ್ರಮವನ್ನು ವ್ಯಯಿಸುತ್ತಿದ್ದಾರೆ. ನಾವೆಲ್ಲರೂ ನಮ್ಮ ಕೆಲಸವನ್ನು ಉತ್ತಮವಾಗಿ ಮಾಡಬೇಕಾದ ಸಮಯ ಇದಾಗಿದೆ' ಎಂದು ಸಮಂತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT