ಭಾನುವಾರ, ಮಾರ್ಚ್ 26, 2023
21 °C

ಸಮಂತಾ ಸೀರೆ ಮೋಡಿ: ಅಭಿಮಾನಿಗಳಿಂದ ಪ್ರೀತಿಯ ಸುರಿಮಳೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ಪರಂಪರೆ ಮತ್ತು ಸೀರೆಯದು ಬಿಡಿಸಲಾಗದ ನಂಟು. ಇದು ಅಷ್ಟು ಸುಲಭಕ್ಕೆ ಸಡಿಲವಾಗದು. ನಟೀಮಣಿಯರು ಧರಿಸುವ ತರೇಹವಾರಿ ಸೀರೆಗಳು ಸಾಮಾಜಿಕ ಜಾಲತಾಣದಲ್ಲಿ ಬಹುಬೇಗ ಟ್ರೆಂಡ್‌ ಸೃಷ್ಟಿಸುತ್ತವೆ. ಇದಕ್ಕೆ ಹೊಸ ಸೇರ್ಪಡೆ ಟಾಲಿವುಡ್‌ ಬೆಡಗಿ ಸಮಂತಾ ಅಕ್ಕಿನೇನಿ.

ಸಮಂತಾ ಅಭಿಮಾನಿಗಳ ಪಾಲಿಗೆ ಸೌಂದರ್ಯ ದೇವತೆ. ಇತ್ತೀಚೆಗೆ ರಾಜಾ ರವಿವರ್ಮನ ಕಲಾಕೃತಿಯಾಗಿ ಕ್ಯಾಮೆರಾಕ್ಕೆ ಆಕೆ ನೀಡಿದ್ದ ಭಂಗಿ ದೊಡ್ಡಮಟ್ಟದ ಸುದ್ದಿಯಾಗಿತ್ತು. ತೆಲುಗಿನ ‘ಯೇ ಮಾಯಾ ಚೆಸಾವೆ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಆಕೆ ಹಲವು ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿದ್ದಾರೆ.

ಕೋರಿಯನ್‌ ರಿಮೇಕ್ ‘ಓ ಬೇಬಿ’ ಚಿತ್ರದ ಯಶಸ್ಸಿನ ಬಳಿಕ ಆಕೆ ನಟಿಸಿದ ತೆಲುಗಿನ ‘ಜಾನು’ ಚಿತ್ರ ತೆರೆಕಂಡಿದೆ. ಇದು ತಮಿಳಿನ ‘96’ ಸಿನಿಮಾದ ರಿಮೇಕ್. ಇದರ ಪ್ರಚಾರ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಸಮಂತಾ ಮತ್ತೆ ಸುದ್ದಿಯಾಗಿದ್ದಾರೆ. ಅದು ಆ ಚಿತ್ರದಲ್ಲಿನ ನಟನೆಯಿಂದಲ್ಲ; ಆಕೆ ಧರಿಸಿದ್ದ ಸೀರೆಯಿಂದ!

ತೆಳುವಾದ ಪಿಂಕ್‌ ಸೀರೆಯಲ್ಲಿ ಆಕೆ ವೇದಿಕೆ ಪ್ರವೇಶಿಸಿದಾಗ ಸಭಿಕರು ಫಿದಾ ಆದರಂತೆ. ಅಂದಹಾಗೆ ಈ ಸೀರೆಯನ್ನು ವಿನ್ಯಾಸಗೊಳಿಸಿದ್ದು ಪಿಚ್ಚಿಕಾ ಬ್ರಾಂಡ್‌ನ ವಿನ್ಯಾಸಕಿ ಊರ್ವಶಿ ಸೇಥಿ. ಆ ಸೀರೆಯ ಮೇಲೆ ‘ಜಾನು’ ಎಂದು ಚಿತ್ರದ ಹೆಸರನ್ನು ಬರೆದಿದ್ದು ವಿಶೇಷ.

ಸಮಂತಾಗೆ ಈ ಸೀರೆ ಧರಿಸಲು ಸ್ಫೂರ್ತಿ ಯಾರು? ಎಂದು ಆಕೆಯ ಅಭಿಮಾನಿಗಳು ಪತ್ತೆಗೆ ಇಳಿದರಂತೆ. ಆಕೆಗೆ ಬಾಲಿವುಡ್‌ ನಟಿ ಕರೀನಾ ಕ‍ಪೂರ್‌ ಅವರೇ ಸ್ಫೂರ್ತಿ ಎಂಬ ಉತ್ತರ ಸಿಕ್ಕಿದೆ. ಕಳೆದ ವರ್ಷ ಕರೀನಾ ನಟಿಸಿದ್ದ ಹಿಂದಿಯ ‘ಗುಡ್‌ ನ್ಯೂಜ್‌’ ಚಿತ್ರ ತೆರೆ ಕಂಡಿತ್ತು. ಇದರ ಪ್ರಚಾರ ಕಾರ್ಯಕ್ರಮದಲ್ಲಿ ಕರೀನಾ ಕೂಡ ಇದೇ ಬಣ್ಣದ ಸೀರೆ ಧರಿಸಿದ್ದರು. ಸೀರೆಯ ಮೇಲೆ ಆಕೆಯ ಮುದ್ದಿನ ಹೆಸರು ‘ಬೆಬೊ’ ಎಂದು ಇದ್ದಿದ್ದು ಆಗ ಸುದ್ದಿಯಾಗಿತ್ತು.

ಹೊಸ ಸೀರೆ ಧರಿಸಿರುವ ಫೋಟೊವನ್ನು ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಪ್ರೀತಿಯ ನಾಯಿಯೊಟ್ಟಿಗೆ ಇರುವ ಮತ್ತೊಂದು ಚಿತ್ರವನ್ನೂ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಪ್ರೀತಿಯ ಸುರಿಮಳೆ ಸುರಿಸಿದ್ದಾರೆ.

 
 
 
 

 
 
 
 
 
 
 
 
 

My son the 🌟 #Hash #chroniclesofbeingcute #jaanu @picchika @ridhiasranijewelry

A post shared by Samantha Akkineni (@samantharuthprabhuoffl) on

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು