ಮಂಗಳವಾರ, ಆಗಸ್ಟ್ 9, 2022
23 °C

‘ಸಂಚಿನ ಸುಳಿಯಲಿ’ ಸಿಕ್ಕ ಭೂಮಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಖ್ಯಾತಿಯ ಪವನ್‌ಕುಮಾರ್ ಹಾಗೂ ‘ಕಿನ್ನರಿ’ಯ ನಟಿ, ಬಿಗ್‌ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ ನಟಿಸಿರುವ ‘ಸಂಚಿನ ಸುಳಿಯಲಿ’ ಸಿನಿಮಾ ಮುಹೂರ್ತ ಇತ್ತೀಚೆಗೆ ನಡೆಯಿತು.

ನಿರ್ದೇಶಕ ನಂದಕಿಶೋರ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿದರು. ಉದ್ಯಮಿ ಕೆ.ಎನ್.ನಾಗೇಗೌಡ ಮತ್ತು ಮೈಸೂರಿನ ಫ್ಯಾಶನ್ ಡಿಸೈನರ್ ಹಂಸರವಿಶಂಕರ್ ಜಂಟಿಯಾಗಿ ಮಾನ್ಯ ಕ್ರಿಯೇಶನ್ಸ್ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ಅಚಲ’ ‘ಯಾರವಳು’ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರಮೋದ್ ಎಸ್. ಆರ್. ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. 

‘2014ರಂದು ಮೈಸೂರಿನಲ್ಲಿ ನಡೆದ ಘಟನೆಯೊಂದು ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಅದರ ಎಳೆಯನ್ನು ತೆಗೆದುಕೊಂಡು ಕಥೆ ಹೆಣೆದಿದ್ದೇನೆ. ಕಾಲೇಜು ವಿಷ್ಯಾರ್ಥಿಗಳ ತಂಡವೊಂದು ನಿರ್ಜನ ಪ್ರದೇಶಕ್ಕೆ ತೆರೆಳುತ್ತದೆ. ಅಲ್ಲಿಗೆ ಹೋದಾಗ ಸಂಚಿನ ಸುಳಿಯಲ್ಲಿ ಸಿಲುಕುತ್ತಾರೆ. ಇದು ಕಥೆಯ ಎಳೆ’ ಎಂದಿದ್ದಾರೆ ಪ್ರಮೋದ್‌. ಕಥೆಗೆ ಅನುಗುಣವಾಗಿ ಶೇಕಡ 90ರಷ್ಟು ಚಿತ್ರೀಕರಣವನ್ನು ಉಡುಪಿ, ಬೆಂಗಳೂರು ಸುತ್ತಮುತ್ತ ಎರಡು ಹಂತದಲ್ಲಿ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಕೆವಿನ್ ಎಂ. ಸಂಗೀತ, ವಿನೋದ್ ಆರ್. ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು