ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ನೋಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಈ ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಡೀ ಚಿತ್ರತಂಡಕ್ಕೆ ಹಾಗೂ ಹೊಸ ಕಲಾವಿದರಿಗೂ ಶುಭವಾಗಲಿ‘ ಎಂದಿದ್ದಾರೆ.

ಬಿಡುಗಡೆಗೊಂಡಿರುವ ಟ್ರೇಲರ್ನಲ್ಲಿ, ‘ಈ ಕಥೆಯು ಮೈಸೂರು ಭಾಗದಲ್ಲಿ ನಡೆಯುತ್ತದೆ. ಮಧ್ಯಮ ವರ್ಗದ ಪ್ರಶಾಂತ್ಗೆ ತನ್ನ ಕುಟುಂಬ, ಕೆಲಸ, ಸ್ನೇಹಿತರಷ್ಟೆ ಅವನ ಪ್ರಪಂಚವಾಗಿರುತ್ತದೆ. ಬಳಿಕ ಯಾವುದೋ ಒಂದು ಪ್ರಕರಣದಲ್ಲಿ ಜೈಲು ಸೇರಿ ಅವನು ‘ಮ್ಯಾಂಗೋ ಪಚ್ಚ’ ಆಗಿ ಗುರುತಿಸಿಕೊಳ್ಳುತ್ತಾನೆ. ಸಿನಿಮಾದೊಳಗಿನ ಪಾತ್ರಗಳನ್ನು ತಮ್ಮ ದನಿಯಿಂದಲೇ ಪರಿಚಯಿಸಿದ್ದಾರೆ. ಈ ಚಿತ್ರವು ಕ್ರೈಂ ಥ್ರಿಲ್ಲರ್ ಕಥೆ ಹೊಂದಿರುವುದು ಟ್ರೇಲರ್ನಲ್ಲಿ ಕಾಣಿಸುತ್ತಿದೆ.

ಈ ಚಿತ್ರದಲ್ಲಿ ಭಾವನಾ ರಾಮಣ್ಣ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಉಗ್ರಂ ಮಂಜು, ರಾಕ್ ಲೈನ್ ವೆಂಕಟೇಶ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾದಲ್ಲಿ ಸಂಚಿತ್ ತಾಯಿ ‘ಪದ್ಮ’ಳಾಗಿ ಹರಿಣಿ ಶ್ರೀಕಾಂತ್, ‘ಸುಜಿ’ಯಾಗಿ ಕಾಜಲ್ ಕುಂದರ್, ‘ನಾಗಪ್ಪ’ ಪಾತ್ರದಲ್ಲಿ ಮಯೂರ್ ಪಟೇಲ್ ಅವರು ಅಭಿನಯಿಸಿದ್ದಾರೆ.

ವಿವೇಕ ನಿರ್ದೇಶನದ ‘ಮ್ಯಾಂಗೋ ಪಚ್ಚ’ ಚಿತ್ರವು ಜೂನ್ 5 ರಂದು ಬಿಡುಗಡೆಯಾಗಲಿದೆ. ಚಿತ್ರವನ್ನು ಕೆಆರ್ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಶೇಖರ್ ಚಂದ್ರ ಅವರ ಛಾಯಾಚಿತ್ರಗ್ರಹಣ, ಚರಣ್ ರಾಜ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.