ಕನ್ನಡ ಚಿತ್ರರಂಗದ ಯಶಸ್ಸಿನ ಪ್ರಮಾಣ ಶೇಕಡ 2–3ರಷ್ಟೇ ಇದ್ದರೂ ಸೆಟ್ಟೇರುತ್ತಿರುವ ಸಿನಿಮಾಗಳ ಪ್ರಮಾಣಕ್ಕೆ ಇದು ಅಡ್ಡಿಯಾಗಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಒಬ್ಬರೇ ನಿರ್ಮಾಪಕರು ಮೂರು ಸಿನಿಮಾಗಳ ನಿರ್ಮಾಣಕ್ಕೆ ಏಕಕಾಲದಲ್ಲಿ ಚಾಲನೆ ನೀಡಿದ್ದಾರೆ.

ಅರುಣ ಕುಮಾರ್ ಮಾಲೀಕತ್ವದ ಮ್ಯಾಟ್ರಿಕ್ ಮೂವೀ ಮೇಕರ್ಸ್ ಈ ಸಾಹಸಕ್ಕೆ ಕೈಹಾಕಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಕೀರ್ತಿ ಕೃಷ್ಣ ನಿರ್ದೇಶನದ ‘ಸೀತಾ ರಾಮ ರಾಜು’, ಸ್ವಸ್ತಿಕ್ ನಿರ್ದೇಶನದ ‘ದರ್ಶನ’ ಹಾಗೂ ‘ಲವ್ ಯು ಮುದ್ದು’ ಖ್ಯಾತಿಯ ಕುಮಾರ್ ನಿರ್ದೇಶನದ ಹೊಸ ಚಿತ್ರ ಪ್ರಾರಂಭವಾಯಿತು.

ಸೀತಾ ರಾಮ ರಾಜು: ಈ ಚಿತ್ರದಲ್ಲಿ ‘ಬಿಗ್ಬಾಸ್’ ಖ್ಯಾತಿಯ ಕಾರ್ತಿಕ್ ಮಹೇಶ್ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ಜೊತೆಯಾಗಿದ್ದಾರೆ. ಆರ್ಮುಗಂ ರವಿಶಂಕರ್, ಜಗಪ್ಪ, ‘ಮಹಾನಟಿ’ ಖ್ಯಾತಿಯ ದೀಪಿಕಾ ತಾರಾಬಳಗದಲ್ಲಿದ್ದಾರೆ. ಸಿನಿಮಾ ಕುರಿತು ಮಾತನಾಡಿದ ಕೀರ್ತಿ ಕೃಷ್ಣ, ‘ಸೀತಾ ರಾಮನ ಜೊತೆಗೆ ಹನುಮನಾಗಿ ರಾಜು ಪಾತ್ರ ಬರುತ್ತದೆ. ಚಿಕ್ಕಮಗಳೂರು, ಬೆಂಗಳೂರು ಸುತ್ತ ನಡೆಯುವ ಕಥೆ ಇದು’ ಎಂದರು. ‘ಸುಂದರವಾದ ಪ್ರೇಮಕಥೆಯ ಸಿನಿಮಾವಿದು. ಒಂದೇ ದಿನ ಮೂರು ಸಿನಿಮಾಗಳನ್ನು ಪ್ರಾರಂಭಿಸುವುದು ಸುಲಭದ ಮಾತಲ್ಲ’ ಎಂದರು ಕಾರ್ತಿಕ್ ಮಹೇಶ್. ಕ್ರಾಂತಿಕುಮಾರ್ ಸಂಭಾಷಣೆ, ರಾಘವೇಂದ್ರ ವಿ.ಸಂಗೀತ ಹಾಗೂ ಅಭಿಲಾಶ್ ಕಳತಿ ಛಾಯಾಚಿತ್ರಗ್ರಹಣ ಸಿನಿಮಾಗಿದೆ.

ದರ್ಶನ: ಈ ಸಿನಿಮಾದಲ್ಲಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಮುಖ್ಯಭೂಮಿಕೆಯಲ್ಲಿದ್ದು, ನಿಶಾ ರವೀಂದ್ರ ನಾಯಕಿಯಾಗಿದ್ದಾರೆ. ಇದೊಂದು ಕಾಮಿಡಿ ಡ್ರಾಮಾ ಜಾನರ್ ಚಿತ್ರವಾಗಿದ್ದು, ಸ್ವಸ್ತಿಕ್ಗೆ ಮೊದಲ ಚಿತ್ರ. ‘ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ. ಗೌರವ ಶೆಟ್ಟಿ, ಸಂತು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತಬಲಾ ನಾಣಿ ಅವರು ಇಲ್ಲಿ ‘ಬಂಗಾರಪ್ಪ’ ಎಂಬ ಪಾತ್ರ ಮಾಡುತ್ತಿದ್ದಾರೆ’ ಎಂದರು ಸ್ವಸ್ತಿಕ್.

ಕುಮಾರ್ ನಿರ್ದೇಶನದ ಹೊಸ ಚಿತ್ರದಲ್ಲಿ ತಬಲಾ ನಾಣಿ ಅವರು ಪ್ರಮುಖ ಪಾತ್ರದಲ್ಲಿರಲಿದ್ದಾರೆ. ಈ ಚಿತ್ರವಿನ್ನೂ ಪ್ರಾಥಮಿಕ ಹಂತದಲ್ಲಿದ್ದು ಕಲಾವಿದರ ಆಯ್ಕೆ ನಡೆಯಬೇಕಿದೆ. ‘ಎದ್ದೇಳು ಮಂಜುನಾಥ’ ಸಿನಿಮಾದಲ್ಲಿನ ತಬಲಾ ನಾಣಿಯವರ ಪಾತ್ರದಿಂದ ಪ್ರೇರಣೆ ಪಡೆದು ಕುಮಾರ್ ಈ ಸಿನಿಮಾ ಕಥೆ ಹೆಣೆದಿದ್ದಾರೆ. ‘ಹಾಸ್ಯ ಪ್ರಧಾನ ಸಿನಿಮಾ ಇದಾಗಿದ್ದು, ‘ಎದ್ದೇಳು ಮಂಜುನಾಥ’ ಕಥೆಗೂ ನನ್ನ ಕಥೆಗೂ ಸಂಬಂಧವಿಲ್ಲ’ ಎಂದಿದ್ದಾರೆ ಕುಮಾರ್. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-51-696280731

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.