ಸಿನಿಮಾ: ಬರುತ್ತಿದ್ದಾರೆ ‘ಬಿಲ್‌ ಗೇಟ್ಸ್‌’

ಮಂಗಳವಾರ, ಮಾರ್ಚ್ 26, 2019
31 °C

ಸಿನಿಮಾ: ಬರುತ್ತಿದ್ದಾರೆ ‘ಬಿಲ್‌ ಗೇಟ್ಸ್‌’

Published:
Updated:

‘ಬಿಲ್‌ ಗೇಟ್ಸ್‌’ ಬರುತ್ತಿದ್ದಾರೆ
ಚಂದನವನದಲ್ಲಿ ‘ಬಿಲ್‌ ಗೇಟ್ಸ್‌’ ಹೆಸರಿನ ಸಿನಿಮಾ ಒಂದು ನಿರ್ಮಾಣವಾಗಿದೆ. ಪಾಂಚಜನ್ಯ ಸಿನಿ ಕ್ರಿಯೆಷನ್ಸ್ ಅಡಿ ಕೆಲವು ಸ್ನೇಹಿತರು ಸೇರಿಕೊಂಡು ನಿರ್ಮಿಸಿರುವ ಈ ಚಿತ್ರವನ್ನು ಶ್ರೀನಿವಾಸ್ ಮಂಡ್ಯ ನಿರ್ದೇಶಿಸಿದ್ದಾರೆ.

ಕೆಜಿಎಫ್ ಚಿತ್ರಕ್ಕೆ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದ ಶಿವಕುಮಾರ್‌ ಅವರು ಬಿಲ್ ಗೇಟ್ಸ್ ಚಿತ್ರಕ್ಕೂ ಕಲಾ ನಿರ್ದೇಶಕರಾಗಿದ್ದಾರೆ. ಅಂದ ಮೇಲೆ, ಈ ಚಿತ್ರದಲ್ಲೂ ಅದ್ಧೂರಿತನ ಕಾಣಿಸಲಿದೆ ಎಂದು ಕನ್ನಡ ಸಿನಿಮಾ ವೀಕ್ಷಕರು ನಿರೀಕ್ಷಿಸಬಹುದು. ಸಿನಿಮಾದಲ್ಲಿ ಚಿಕ್ಕಣ್ಣ ಹಾಗೂ ಶಿಶಿರ್‌ ಅವರ ಕಾಂಬಿನೇಷನ್‌ನಲ್ಲಿ ಯಮಲೋಕ ದೃಶ್ಯವೊಂದಿದೆ. ಅದಕ್ಕಾಗಿ ಅರಮನೆಯ ಬೃಹತ್‌ ಸೆಟ್‌ ಹಾಕಲಾಗಿತ್ತಂತೆ.

ಈ ಚಿತ್ರದಲ್ಲಿ ಕುರಿ ಪ್ರತಾಪ್ ರಾಜಶೇಖರ್, ರಶ್ಮಿತಾ, ವಿ. ಮನೋಹರ್, ಅಕ್ಷರಾ ರೆಡ್ಡಿ, ಬ್ಯಾಂಕ್ ಜನಾರ್ದನ್, ಗಿರಿ ಮುಂತಾದವರು ಅಭಿನಯಿಸಿದ್ದಾರೆ. ಸಿನಿಮಾ ಈಗ ಪೊಸ್ಟ್ ಪ್ರೋಡಕ್ಷನ್ ಹಂತದಲ್ಲಿದೆ.  ಶೀಘ್ರದಲ್ಲೇ ಪ್ರೆಕ್ಷಕರಿಗೆ ಕಾಮಿಡಿ ರಸದೌತಣ ಬಡಿಸಲಿದೆ ಎಂದು ಚಿತ್ರ ತಂಡ ಹೇಳಿದೆ.

***
‘ಸುವರ್ಣ ಸುಂದರಿ’ಗೆ ಶ್ರೀಮುರಳಿ ಮೆಚ್ಚುಗೆ
ನಟ ಶ್ರೀಮುರಳಿ ಅವರು ಇತ್ತೀಚಿಗೆ ‘ಸುವರ್ಣ ಸುಂದರಿ’ ಸಿನಿಮಾದ ಹಾಡನ್ನು ಬಿಡುಗಡೆ ಮಾಡಿ ಅದರ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಎಂ.ಎಸ್.ಎನ್. ಸೂರ್ಯ ಅವರು ನಿರ್ದೇಶಿಸಿದ್ದಾರೆ. ಜಯಪ್ರದಾ, ಸಾಯಿಕುಮಾರ್, ಸಾಕ್ಷಿ, ತಿಲಕ್, ಅವಿನಾಷ್, ಜೈ ಜಗದೀಶ್, ಶಾನ್ ಹಾಗೂ ಇತರರು ಚಿತ್ರದಲ್ಲಿದ್ದಾರೆ.

ಎಂ.ಎನ್. ಲಕ್ಷ್ಮಿ ಈ ಚಿತ್ರದ ನಿರ್ಮಾಪಕಿ. ಸಾಯಿ ಕಾರ್ತಿಕ್ ಸಂಗೀತ ಹಾಗೂ ರೀ ರೆಕಾರ್ಡಿಂಗ್ ಮಾಡಿದ್ದಾರೆ. ಈಶ್ವರ್ ಛಾಯಾಗ್ರಹಣ ಮಾಡಿದ್ದಾರೆ.

***
‘ವಜ್ರಮುಖಿ’ ಸಿದ್ಧ
ಶ್ರೀ ಸಿಗಂದೂರು ಚೌಡೇಶ್ವರಿ ಸಿನಿ ಕಂಬೈನ್ಸ್ ಲಾಂಛನದಡಿ ಶಶಿಕುಮಾರ್ ಅವರು ಕಥೆ- ಚಿತ್ರಕಥೆ ಬರೆದು ನಿರ್ಮಾಣ ಮಾಡಿರುವ ‘ವಜ್ರಮುಖಿ’ ಸಿನಿಮಾದ ಪ್ರಥಮ ಪ್ರತಿ ಸಿದ್ಧವಾಗಿದೆಯಂತೆ.

ನೀತು, ದಿಲೀಪ್ ಪೈ, ಸಂಜನಾ, ಶೋಭಿತಾ, ಪ್ರಕಾಶ್ ಹೆಗ್ಗೋಡು, ರವಿಕಿರಣ್, ನೇಹಾ, ರಾಘವೇಂದ್ರ ರೈ, ಶಶಿಕುಮಾರ್, ಅನಿಲ್ ಕುಮಾರ್, ಸ್ವಪ್ನಶ್ರೀ, ಪ್ರೇಕ್ಷಾ ಅವರನ್ನೊಳಗೊಂಡ ತಾರಾಗಣ ಈ ಚಿತ್ರದಲ್ಲಿದೆ.

ಪಿ.ಕೆ.ಎಚ್. ದಾಸ್ ಛಾಯಾಗ್ರಹಣ ಮಾಡಿದ್ದಾರೆ. ರಾಜ್‍ಭಾಸ್ಕರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ಹಾಗೂ ವಿನಾಯಕ ರಾಮ್ ಸಂಭಾಷಣೆ ಬರೆದಿದ್ದಾರೆ.

***
 
‘ಹಫ್ತಾ’ಕ್ಕೆ ಹಿನ್ನೆಲೆ ಸಂಗೀತ
ಮೈತ್ರಿ ಮಂಜುನಾಥ್ ಅವರು ನಿರ್ಮಿಸಿರುವ ‘ಹಫ್ತಾ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ಜೋಡಣೆಯ ಕೆಲಸ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಗೌತಮ್ ಶ್ರೀವತ್ಸ ನೇತೃತ್ವದಲ್ಲಿ ನಡೆದಿದೆ.

ಪ್ರಕಾಶ್ ಹೆಬ್ಬಾಳ್ ನಿರ್ದೇಶನದ ಈ ಚಿತ್ರದ ಛಾಯಾಗ್ರಹಣವನ್ನು ಸೂರಿ ಸಿನಿಟೆಕ್ ಮಾಡಿದ್ದಾರೆ. ವಿಜಿ ಯಾಡ್ಲಿನಾ ಸಂಗೀತ ನೀಡಿದ್ದಾರೆ. ಈ ಚಿತ್ರ ಸಂಪೂರ್ಣ ಮನರಂಜನಾತ್ಮಕವಾಗಿದ್ದು ಭೂಗತ ಜಗತ್ತಿನ ಕಥೆಯನ್ನೊಳಗೊಂಡಿದೆ. ವರ್ಧನ್ ತೀರ್ಥಹಳ್ಳಿ, ಬಿಂಬಶ್ರೀ ನಿನಾಸಂ, ರಾಘವ್‍ನಾಗ್, ಬಲರಾಜ್ ವಾಡಿ, ದಶಾವರ ಚಂದ್ರು, ಉಗ್ರಂ ರವಿ, ಚಂದ್ರು ಮುಂತಾದವರ ತಾರಾಗಣವಿದೆ.

***
‘ನಿಗರ್ವ’ ಏಪ್ರಿಲ್‍ನಲ್ಲಿ ಆರಂಭ
ಮುಸುರಿ ಕೃಷ್ಣಮೂರ್ತಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ನೂತನ ಚಿತ್ರಕ್ಕೆ ‘ನಿಗರ್ವ’ಎಂದು ಹೆಸರಿಡಲಾಗಿದೆಯಂತೆ. ಏಪ್ರಿಲ್‍ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರ ತಂಡ ಹೇಳಿದೆ.

ಜಯಸಿಂಹ ಮುಸುರಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುದತ್ ಮುಸುರಿ ಅವರ ಛಾಯಗ್ರಹಣವಿದೆ. ‘ನಿಗರ್ವ’ ಚಿತ್ರದ ಇತರ ಮಾಹಿತಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಜಯಸಿಂಹ ಮುಸುರಿ ತಿಳಿಸಿದ್ದಾರೆ.

***

ಚಿತ್ರೀಕರಣ ಪೂರ್ಣ
ಶ್ರೀ ಲಕ್ಷ್ಮೀವೆಂಕಟೇಶ್ವರ ಮೂವಿ ಮೇಕರ್ಸ್ ಲಾಂಛನದಲ್ಲಿ ನಾಗರಾಜ್ ಮತ್ತು ಮನೋಜ್ ಅವರು ನಿರ್ಮಿಸುತ್ತಿರುವ ‘ಟರ್ನಿಂಗ್ ಪಾಯಿಂಟ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ವಿನು ಮಹೇಶ್ ರೈ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬೆಂಗಳೂರು, ಕುಶಾಲನಗರ, ಮಡಿಕೇರಿ, ಸುಳ್ಯ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ಸುರೇಶ್ ಅರಸ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಎ.ಆರ್. ವಿನ್ಸೆಂಟ್‌ ಅವರ ಛಾಯಾಗ್ರಹಣವಿದೆ. ತಾರಾಬಳಗದಲ್ಲಿ ಆದಿಕೇಶವ್, ಅನಿಕಾರಾವ್, ಜೈಜಗದೀಶ್, ವಿನಯಾ ಪ್ರಸಾದ್, ಶ್ರೀನಿವಾಸಮೂರ್ತಿ, ದಿಶಾ ಪೂವಯ್ಯ, ಜೋಸೈಮನ್, ರಾಧಿಕಾ, ರಾಘವೇಂದ್ರ ರೈ, ಉಮೇಶ್ ಮಿಜಾರ್ ಇದ್ದಾರೆ.

***
ಏಪ್ರಿಲ್‍ನಲ್ಲಿ ‘ವೀಕ್ ಎಂಡ್’
ಮಂಜುನಾಥ್ ಡಿ. ಅವರು ನಿರ್ಮಿಸಿರುವ ‘ವೀಕ್ ಎಂಡ್’ ಚಿತ್ರ ಸಿದ್ದವಾಗಿದ್ದು ಏಪ್ರಿಲ್‍ನಲ್ಲಿ ತೆರೆಗೆ ಬರಲಿದೆ ಎಂದು ಚಿತ್ರ ತಂಡ ಹೇಳಿದೆ.

ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನೀಡಿದ್ದಾರೆ. ಮಿಲಿಂದ್ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಸಂಜನಾ ಬುರ್ಲಿ. ಅನಂತನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನಾ ಪ್ರಶಾಂತ್, ನೀತು ಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !