ಶನಿವಾರ, ಜೂನ್ 12, 2021
28 °C

ದ್ವಾರಕೀಶ್‌ @78

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದ್ವಾರಕೀಶ್‌ ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಎನಿಸಿದ್ದಾರೆ. ಈ ದಿನ ಅವರಿಗೆ 78ನೇ ಜನ್ಮ ದಿನದ ಸಂಭ್ರಮ. ಸ್ಯಾಂಡಲ್‌ವುಡ್‌ ಚಿತ್ರಗಳಲ್ಲಿ ನಟನಾಗಿ ಹಾಸ್ಯದ ಹೊನಲು ಹರಿಸಿದ ಈ ‘ಪ್ರಚಂಡ ಕುಳ್ಳ’  ಅಭಿಮಾನಿಗಳ ‌ಹೃದಯದಲ್ಲಿ ಕಾಯಂ ಸ್ಥಾನ ಪಡೆದುಕೊಂಡಿದ್ದಾರೆ. 

ಕನ್ನಡ ಸಿನಿಪ್ರಿಯರ ಹೃದಯ ಗೆದ್ದ ಈ ಪ್ರಚಂಡ ಕುಳ್ಳನಿಗೆ ಚಿತ್ರರಂಗದ ಪ್ರಮುಖರು ಮತ್ತು ರಾಜಕಾರಣಿಗಳು ಜನ್ಮದಿನದ ಶುಭಾಶಯ ಹೇಳಿದ್ದಾರೆ. ಈ ಹಿರಿಯ ನಟನಿಗೆ ತಮ್ಮ ಮೊಮ್ಮಗಳು ಅಂದರೆ, ತಮ್ಮ ನಾಲ್ಕನೇ ಪುತ್ರ ಸುಖೀಶ್‌ ಅವರ ಪುತ್ರಿ ದೀಕ್ಷಾ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಡಬಲ್ ಖುಷಿ ಅವರದು. ಧೀಕ್ಷಾ ಹುಟ್ಟಿರುವುದು ದ್ವಾರಕೀಶ್‌ ಜನ್ಮದಿನದಂದೇ. 

 

 

 

ದ್ವಾರಕೀಶ್‌ ನಟನೆಯ ಜತೆಗೆ ಇದುವರೆಗೆ ತಮ್ಮ ಚಿತ್ರ ನಿರ್ಮಾಣ ಸಂಸ್ಥೆಯಿಂದ 52 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳದಲ್ಲೂ ಚಿತ್ರ ನಿರ್ಮಿಸಿದ ಹೆಗ್ಗಳಿಕೆ ಇವರದು. ಅಲ್ಲದೆ, 19 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 

 

ಶಿವರಾಜ್‌ಕುಮಾರ್‌ ಮತ್ತು ರಚಿತಾ ರಾಮ್‌ ನಟಿಸಿದ ‘ಆಯುಷ್ಮಾನ್’‌ ಚಿತ್ರಕ್ಕೆ ದ್ವಾರಕೀಶ್‌ ಮತ್ತು ಅವರ ಪುತ್ರ ಯೋಗಿ ದ್ವಾರಕೀಶ್‌ ಬಂಡವಾಳ ಹೂಡಿದ್ದರು. ಈ ಚಿತ್ರದ ಹಂಚಿಕೆ ವಿಚಾರವಾಗಿ ಸಿನಿಮಾ ವಿತರಕ ಜಯಣ್ಣ ಜತೆಗೆ ವಿವಾದ ಉಂಟಾಗಿ, ದ್ವಾರಕೀಶ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಸಿನಿಮಾ ನಂತರ ಮತ್ಯಾವುದೇ ಚಿತ್ರಗಳನ್ನು ದ್ವಾರಕೀಶ್‌ ಕೈಗೆತ್ತಿಕೊಂಡಂತಿಲ್ಲ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು