ಶನಿವಾರ, ಮೇ 15, 2021
24 °C

Bigg Boss-8| ಅನಾರೋಗ್ಯ: ಈ ‘ವಾರದ ಕಥೆ' ಕೇಳಲು ಸುದೀಪ್‌ ಬರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಸುದೀಪ್‌ ಅವರ ಆರೋಗ್ಯದ ಕುರಿತು ವದಂತಿಗಳು ಹರಡುತ್ತಿರುವ ಬೆನ್ನಲ್ಲೇ, ಸ್ವತಃ ಸುದೀಪ್‌ ಈ ಕುರಿತು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. 

‘ನನಗೆ ಆರೋಗ್ಯ ಹದಗೆಟ್ಟಿತ್ತು. ವಾರಾಂತ್ಯದೊಳಗೆ ಚೇತರಿಸಿಕೊಳ್ಳುವ ಭರವಸೆ ನನಗಿತ್ತು. ಆದರೆ, ನನಗೆ ಇನ್ನಷ್ಟು ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ನನ್ನ ವೈದ್ಯರು ಸೂಚಿಸಿರುವ ಕಾರಣದಿಂದ, ಬಿಗ್‌ಬಾಸ್‌ ವಾರಾಂತ್ಯದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ನಾನು ಗೈರಾಗುತ್ತಿರುವ ಕಾರಣದಿಂದ, ಎಲಿಮಿನೇಷನ್‌ ಪ್ರಕ್ರಿಯೆಗೆ ಬಿಗ್‌ಬಾಸ್‌ ತಂಡವು ಪರ್ಯಾಯವಾಗಿ ಯಾವ ರೀತಿಯಲ್ಲಿ ಈ ವಾರಾಂತ್ಯದ ಎಪಿಸೋಡ್‌ ನಡೆಸಿಕೊಡಲಿದೆ ಎನ್ನುವುದನ್ನು ತಿಳಿಯಲು ಕಾತುರದಿಂದಿದ್ದೇನೆ’ ಎಂದು ಸುದೀಪ್‌ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Bigg Boss-8| ಸುದೀಪ್‌ಗೆ ಅನಾರೋಗ್ಯ: ಬೇರೊಬ್ಬ ನಿರೂಪಕರ ಮೂಲಕ ‘ವಾರದ ಕಥೆ'?

ಸುದೀಪ್‌ ಟ್ವೀಟ್‌ ನೋಡಿ ಸಾವಿರಾರು ಅಭಿಮಾನಿಗಳು ತಮ್ಮ ಆತಂಕವನ್ನು ಟ್ವೀಟ್‌ ಮೂಲಕವೇ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ‘ನೀವಿಲ್ಲದ ಬಿಗ್‌ಬಾಸ್‌ ಊಹಿಸಿಕೊಳ್ಳುವುದೂ ಕಷ್ಟ’, ‘ಬಿಗ್‌ಬಾಸ್‌ ಅಲ್ಲಿ ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತೇವೆ, ಆದರೆ ಅದಕ್ಕಿಂತ ನಿಮ್ಮ ಆರೋಗ್ಯ ಮುಖ್ಯ’, ‘ಬಿಗ್‌ಬಾಸ್‌ ಶೀಘ್ರ ಗುಣಮುಖರಾಗಲಿ’ ಹೀಗೆ  ಅಭಿಮಾನಿಗಳು ನೂರಾರು ಟ್ವೀಟ್‌ ಮಾಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು