ಭಕ್ತಿಪ್ರಧಾನ ಕಥೆಯನ್ನು ಹೊಂದಿರುವ ‘ಸಿಂಹರೂಪಿಣಿ’ ಚಿತ್ರದ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಚಿತ್ರದ ‘ಮಾ ರುದ್ರಾಣಿ’ ಎಂಬ ಮಾರಮ್ಮ ದೇವಿಯ ಕುರಿತಾದ ಹಾಡನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ಚಿತ್ರ ಸಾಹಿತಿ ಕಿನ್ನಾಳ್‌ರಾಜ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲ್ಮ್ಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ‘ಅಂದುಕೊಂಡಂತೆ ನಿಗದಿತ ಸಮಯದಲ್ಲಿ ಚಿತ್ರೀಕರಣ ಮುಗಿದಿದೆ. ಸದ್ಯ ಮಾತಿನ ಧ್ವನಿಗ್ರಹಣ ಕೆಲಸ ನಡೆಯುತ್ತಿದೆ. ಶೀಘ್ರದಲ್ಲಿ ಚಿತ್ರ ಬಿಡುಗಡೆ ಕುರಿತು ಮಾಹಿತಿ ನೀಡುತ್ತೇವೆ’ ಎಂದಿದ್ದಾರೆ ನಿರ್ದೇಶಕರು.
ಆಕಾಶ್ ಪರ್ವ ಸಂಗೀತವಿದೆ. ಈ ಗೀತೆಗೆ ರವಿಬಸ್ರೂರು, ಸಂತೋಷ್‌ವೆಂಕಿ ಮತ್ತು ಆಕಾಶ್ ಪರ್ವ ಧ್ವನಿಯಾಗಿದ್ದಾರೆ. ಮಾರಮ್ಮ ದೇವಿಯಾಗಿ ಯಶಸ್ವಿನಿ ಕಾಣಿಸಿಕೊಂಡಿದ್ದಾರೆ. ಅಂಕಿತಾಗೌಡ, ಯಶ್‌ಶೆಟ್ಟಿ, ಪುನೀತ್‌ರುದ್ರನಾಗ್, ಹಿರಿಯ ನಟ ಸುಮನ್ ಮುಂತಾದವರು ತಾರಾಗಣದಲ್ಲಿದ್ದಾರೆ.