ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಾಂದಿನಿ ಬಾರ್‌’ ಚಿತ್ರದ ಟೀಸರ್‌‌ ಬಿಡುಗಡೆ

Last Updated 18 ಮಾರ್ಚ್ 2021, 8:30 IST
ಅಕ್ಷರ ಗಾತ್ರ

ಬೆಂಗಳೂರು: ರಾಘವೇಂದ್ರ ಕುಮಾರ್‌ ರಚಿಸಿ, ನಿರ್ದೇಶಿಸಿರುವ ಕ್ಯಾಮೆರಾ ಮೂವೀಸ್‌ ಸಂಸ್ಥೆಯ ಚೊಚ್ಚಲ ಚಿತ್ರ ‘ಚಾಂದಿನಿ ಬಾರ್‌’ ಟೀಸರ್‌ ಬಿಡುಗಡೆಯಾಗಿದೆ.

ವೇಶ್ಯೆಯೊಬ್ಬಳ ಜೀವನ ಹೇಗಿರುತ್ತದೆ ಎನ್ನುವ ಕಥಾಹಂದರವನ್ನು ಚಿತ್ರವು ಹೊಂದಿದೆ. ರಾಘವೇಂದ್ರ ಕುಮಾರ್‌ ಅವರೇ ಇದರಲ್ಲಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚಿತ್ರವು ತೆರೆಯ ಮೇಲೆ ಬರಲಿದೆ. ಬೆಂಗಳೂರು ಹಾಗೂ ಮೈಸೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದೆ.

‘ಸುಮ’ ಎಂಬ ಪಾತ್ರದ ಮುಖಾಂತರ ಸುಕೃತಿ ಪ್ರಭಾಕರ್‌ ನಾಯಕಿಯಾಗಿ ಚಂದನವನಕ್ಕೆ ಕಾಲಿಡುತ್ತಿದ್ದು, ರಂಗಭೂಮಿಯ ಪ್ರಮುಖ ಕಲಾವಿದರ ಬಳಗವೇ ಚಿತ್ರದಲ್ಲಿದೆ. ಚಿತ್ರಕ್ಕೆ ಚೇತನ್‌ ಶರ್ಮ ಎ. ಛಾಯಾಗ್ರಹಣವಿದ್ದು, ರಾಮ್‌ ಕ್ರಿಶ್‌ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT