ಶುಕ್ರವಾರ, ಮೇ 20, 2022
23 °C

‘ಸಾಲ್ಟ್’ ಸವಿದ ಸೆನ್ಸಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಸಾಲ್ಟ್’ಕ್ಕೆ ಸೆನ್ಸಾರ್‌ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ಸೆನ್ಸಾರ್‌ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಚಿತ್ರದ ಕಥಾ ಸಾರಾಂಶ ಚೆನ್ನಾಗಿದೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ ಎಂದು ಚಿತ್ರತಂಡ ಖುಷಿ ಹಂಚಿಕೊಂಡಿದೆ. 

ಚಿತ್ರ ಇದೇ ತಿಂಗಳು ತೆರೆ ಕಾಣುವ ಸಾಧ್ಯತೆ ಇದೆ. ಹಾಗಾಗಿ ಚಿತ್ರದ ಪ್ರಚಾರ ಆರಂಭವಾಗಿದೆ. ಶಾಲಿನಿ ಎಂ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಚನೆ, ನಿರ್ದೇಶನ ಹಾಗೂ ಪ್ರಮುಖ ಪಾತ್ರದಲ್ಲಿ ಭರತ್‌ನಂದ ಇದ್ದಾರೆ. ಅಡುಗೆಗೆ ಉಪ್ಪು ಎಷ್ಟು ಮುಖ್ಯವೋ, ಜೀವನದಲ್ಲಿ ಸಾಲ್ಟ್ ಅವಶ್ಯಕವೆಂದು ಸಾರುವ ಕತೆ ಇದು. ಚೇತನ್‌ಕುಮಾರ್, ಚಂದ್ರು ಛತ್ರಪತಿ, ಸತೀಶ್‌ಮಳವಳ್ಳಿ ನಾಯಕರಿದ್ದಾರೆ. ತಾರಾಗಣದಲ್ಲಿ ಬಾಲರಾಜ್‌ವಾಡಿ, ಸಂದೀಪ್, ವಿಜಯಶ್ರೀ ಕಲಬುರಗಿ, ಯಶಸ್ವಿನಿಶೆಟ್ಟಿ, ರಶ್ಮಿತಗೌಡ,  ಸೂರ್ಯೋದಯ್ ಪೆರಂಪಳ್ಳಿ, ಚಕ್ರವರ್ತಿ ದಾವಣಗೆರೆ, ಹರ್ಷ ಇದ್ದಾರೆ.

ರಾಘವೇಂದ್ರ ಕಾಮತ್ ಅವರು ಹಾಡುಗಳನ್ನು ಬರೆದಿದ್ದಾರೆ. ಯಲಸ್ಟಿನ್-ಯಧುನಂದನ್ ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ. ಸಂಭಾಷಣೆ ಸತೀಶ್‌ಮಳವಳ್ಳಿ ಅವರದ್ದು. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ರಾಜರತ್ನ ಸ್ಟುಡಿಯೋ ಮೂಲಕ ಚಿತ್ರ ಸಿದ್ಧವಾಗಿದೆ.

ಚಿತ್ರೀಕರಣ ಪೂರ್ಣಗೊಂಡಾಗ ಚಿತ್ರ ತಂಡವು ದೊಡ್ಡದಾದ ಕುಂಬಳಕಾಯಿ ಒಡೆದು ಸುದ್ದಿಯಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು