ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ರಣಾಕ್ಷ’ನ ಟ್ರೇಲರ್‌ ಬಿಡುಗಡೆ: ಇದು ದೇವರು-ದೆವ್ವದ ನಡುವಿನ ಸಂಘರ್ಷದ ಕಥೆ

Published : 15 ಸೆಪ್ಟೆಂಬರ್ 2024, 12:45 IST
Last Updated : 15 ಸೆಪ್ಟೆಂಬರ್ 2024, 12:45 IST
ಫಾಲೋ ಮಾಡಿ
Comments

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೀರುಂಡೆ ರಘು ನಾಯಕನಾಗಿ ನಟಿಸಿರುವ ‘ರಣಾಕ್ಷ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ದೇವರು, ದೆವ್ವದ ನಡುವಿನ ಸಂಘರ್ಷದ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಚಿತ್ರಕ್ಕೆ ಕೆ.ರಾಘವ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

‘6 ರಿಂದ 80 ವರ್ಷದವರೂ ಕೂತು ನೋಡುವಂಥ, ಹಳ್ಳಿ ಸೊಗಡಿನ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಿದು. ಯಾವುದೇ ಮಂತ್ರ, ತಂತ್ರ, ಶಕ್ತಿಯಿಂದ ಏನೇ ಸಮಸ್ಯೆ ಎದುರಾದರೂ ಅದನ್ನು ಪರಿಹರಿಸುವುದಕ್ಕೆ ಮನುಷ್ಯನೇ ಬರಬೇಕು ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಸಕಲೇಶಪುರದಲ್ಲಿ ಚಿತ್ರೀಕರಣ ಮಾಡುವಾಗ ಚಿತ್ರದ ನಾಯಕ ರಘು ಅವರಿಗೆ ಏಟಾಗಿತ್ತು. ಅದರಿಂದ ಚೇತರಿಸಿಕೊಂಡು ನಟಿಸಿದ್ದಾರೆ. ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ಮಾಪಕ  ರಾಮು. 

ನಟ ಸೀರುಂಡೆ ರಘು ಮಾತನಾಡಿ, ‘ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ, ಮೊದಲಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾಲ್ಕು ಜನ ಸ್ನೇಹಿತರ ಜೊತೆ ಸಾಗುವ ಪಾತ್ರ. ಚಿತ್ರದ ಕೊನೆಯಲ್ಲಿ ಈ ಪಾತ್ರದ ಪಯಣ ಏನೆಂದು ಗೊತ್ತಾಗುತ್ತದೆ’ ಎಂದರು.

ರಕ್ಷಾ ಹನುಮಂತು ಹಾಗೂ ರೋಹಿ ಚಿತ್ರದ ನಾಯಕಿಯರು. ವಿಶಾಲ್ ಸಂಗೀತ, ದೀಪಕ್ ಕುಮಾರ್ ಛಾಯಾಚಿತ್ರಗ್ರಹಣವಿದೆ. ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT