ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಜ್‌ಕುಮಾರ್‌ 125ನೇ ಚಿತ್ರ ‘ವೇದ’

Last Updated 11 ಮಾರ್ಚ್ 2021, 13:54 IST
ಅಕ್ಷರ ಗಾತ್ರ

ಬೆಂಗಳೂರು: ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರ 125ನೇ ಚಿತ್ರ ‘ವೇದ’ ಭರ್ಜರಿಯಾಗಿ ಸೆಟ್ಟೇರಿದೆ.

ಹರ್ಷ ನಿರ್ದೇಶನದಲ್ಲಿ ಶಿವರಾಜ್‌ ಕುಮಾರ್‌ ಅಭಿನಯಿಸುತ್ತಿರುವ 4ನೇ ಚಿತ್ರ ಇದಾಗಿದೆ.ಈ ಹಿಂದೆ ಹರ್ಷ ನಿರ್ದೇಶನದ ವಜ್ರಕಾಯ, ಭಜರಂಗಿ ನಟಿಸಿದ್ದರು. ಶಿವರಾಜ್‌ಕುಮಾರ್‌ ನಟಿಸಿರುವ ಭಜರಂಗಿ–2 ಕೂಡಾ ಇದೇ ವರ್ಷ ಬಿಡುಗಡೆಯಾಗಲಿದೆ. ಶಿವರಾತ್ರಿಯಂದೇ ಫಸ್ಟ್‌ಲುಕ್‌ ಪೋಸ್ಟರ್‌ ಕೂಡಾ ಬಿಡುಗಡೆಯಾಗಿದೆ. ‘ದಿ ಬ್ರೂಟಲ್‌ 1960ಸ್‌’ ಎಂಬ ಟ್ಯಾಗ್‌ಲೈನ್‌ ಚಿತ್ರಕ್ಕಿದ್ದು, 1960ರ ದಶಕದಲ್ಲಿ ನಡೆಯುವ ಕಥಾವಸ್ತುವಿನ ಸುತ್ತ ಹೆಣೆದ ಕಥೆ ಎನ್ನುವುದು ಸ್ಪಷ್ಟವಾಗಿದೆ.

ಬಿಳಿ ಗಡ್ಡಧಾರಿ ವ್ಯಕ್ತಿಯ ಲುಕ್‌ನಲ್ಲಿ ಶಿವರಾಜ್‌ಕುಮಾರ್‌ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಅವರ ಸಂಗೀತವಿದೆ. ಉಳಿದಂತೆ ಎಲ್ಲ ವಿಚಾರಗಳನ್ನೂ ಚಿತ್ರತಂಡ ಗುಟ್ಟಾಗಿ ಇಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT