ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಿನಿಮಾ: ತೆರೆ ಮೇಲೆ ಕಾಣಲಿದೆ ‘ಆಕಾಶವಾಣಿ ಮೈಸೂರು ಕೇಂದ್ರ’

Last Updated 17 ಜುಲೈ 2022, 10:10 IST
ಅಕ್ಷರ ಗಾತ್ರ

ಆಕಾಶವಾಣಿ ಮೈಸೂರು ಕೇಂದ್ರ... ಹೀಗೊಂದು ಹೆಸರಿನ ಪ್ಯಾನ್‌ ಇಂಡಿಯಾ ಚಿತ್ರ ಸಿದ್ಧವಾಗಿದೆ.ಸತೀಶ್ ಬತ್ತುಲ ನಿರ್ದೇಶನದ ಈ ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿ, ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಕಾರ್ತಿಕ್ ಕೊಡಕಂಡ್ಲ ಈ ಹಾಡಿಗೆ ಸಂಗೀತ ನೀಡಿದ್ದಾರೆ.

ಮಿಥುನಾ ಎಂಟರ್‌ಟೈನ್‌ಮೆಂಟ್‌ ಪ್ರೈ ಲಿ ಹಾಗೂ ಸೈನ್ಸ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಎಂ.ಎಂ.ಅರ್ಜುನ್ ಈ ಚಿತ್ರದ ನಿರ್ಮಾಪಕರು. ವಿಶ್ವನಾಥ್ ಎಂ., ಹರಿಕುಮಾರ್ ಜಿ., ಕಮಲ್ ಮೇಡಗೋಣಿ ಈ ಚಿತ್ರದ ಸಹ ನಿರ್ಮಾಪಕರು.

ಚಿತ್ರ ತೆಲುಗಿನಲ್ಲಿ ಆಕಾಶವಾಣಿ ವಿಶಾಖಪಟ್ಟಣಂ, ಹಿಂದಿಯಲ್ಲಿ ಆಕಾಶವಾಣಿ ಬೊಂಬೈ, ತಮಿಳಿನಲ್ಲಿ ಆಕಾಶವಾಣಿ ಚೆನ್ನೈ ಕೇಂದ್ರ ಹೆಸರಿನಲ್ಲಿ ತೆರೆ ಕಾಣಲಿದೆ.

‘ಈ ಚಿತ್ರ ಲವ್ ಎಂಟರ್‌ ಟೈನರ್ ಹಾಗೂ ಥ್ರಿಲ್ಲಿಂಗ್ ಕಥಾಹಂದರ ಹೊಂದಿರುವ ವಿಭಿನ್ನ ಚಿತ್ರ. ಈ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕ ಅರ್ಜುನ್ ಅವರ ಸಹಕಾರ ಅಪಾರ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ. ಈಗ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ್ದೇವೆ‌. ಸದ್ಯದಲ್ಲೇ ಬಿಡುಗಡೆ ದಿನಾಂಕ ತಿಳಿಸುತ್ತೇವೆ.‌ ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ’ ಎಂದರು ನಿರ್ದೇಶಕ ಸತೀಶ್ ಬತ್ತುಲ.

‘ಎಲ್ಲಾ ಭಾಷೆಯವರು ನೋಡಬಹುದಾದ ಕಥೆಯುಳ್ಳ (ಯೂನಿವರ್ಸಲ್ ಪಾಯಿಂಟ್‌ವುಳ್ಳ) ಚಿತ್ರವಾಗಿರುವುದರಿಂದ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆ ಮಾಡುತ್ತಿದ್ದೇನೆ. ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ನಮ್ಮ ಚಿತ್ರದಲ್ಲಿ ಅದ್ಭುತವಾಗಿದೆ’ ಎನ್ನುತ್ತಾರೆ ಎಂ.ಎಂ.ಅರ್ಜುನ್.

ಶಿವಕುಮಾರ್, ಹುಮಯ್ ಚಂದ್, ಅಕ್ಷತ ಶ್ರೀಧರ್ ಹಾಗೂ ಅರ್ಚನ ಈ ಚಿತ್ರಡ ನಾಯಕ ಹಾಗೂ ನಾಯಕಿಯರಾಗಿ ನಟಿಸಿದ್ದಾರೆ. ಆರಿಫ್ ಈ ಚಿತ್ರದ ಛಾಯಾಗ್ರಾಹಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT