ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕ್ಯೂ’ಗೆ ಕೈಹಾಕಿದ ನಾಗಶೇಖರ್ 

Published : 12 ಸೆಪ್ಟೆಂಬರ್ 2024, 19:02 IST
Last Updated : 12 ಸೆಪ್ಟೆಂಬರ್ 2024, 19:02 IST
ಫಾಲೋ ಮಾಡಿ
Comments

ಸದ್ಯ ‘ಸಂಜು ವೆಡ್ಸ್‌ ಗೀತಾ–2’ ಚಿತ್ರದಲ್ಲಿ ಮಗ್ನರಾಗಿರುವ ನಿರ್ದೇಶಕ ನಾಗಶೇಖರ್‌ ಮತ್ತೊಂದು ಚಿತ್ರ ಘೋಷಿಸಿದ್ದಾರೆ. ಉಪೇಂದ್ರ ಕುಟುಂಬದ ನಿರಂಜನ್‌ ಸುಧೀಂದ್ರ ಚಿತ್ರದ ನಾಯಕ. ‘ಮೈನೆ ಪ್ಯಾರ್‌ ಕಿಯಾ‘ ಖ್ಯಾತಿಯ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ ದಸ್ಸಾನಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. 

ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ‘ಕ್ಯೂ’ ಎಂದು ಹೆಸರಿಡಲಾಗಿದೆ. ತಮ್ಮದೇ ಆದ ನಾಗಶೇಖರ್ ಮ್ಯಾಜಿಕ್ಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿರುವ ಅವರು ಕಥೆ, ಚಿತ್ರಕಥೆಯ ಜೊತೆಗೆ ಸಂಗೀತದ ಜವಾಬ್ದಾರಿಯನ್ನೂ ಸಹ ತಾವೇ ಹೊತ್ತಿದ್ದಾರೆ. 

‘ಚಿತ್ರದ ಮಾತುಕತೆ ಈಗಷ್ಟೇ ಪೂರ್ಣಗೊಂಡು ಪೂರ್ವಸಿದ್ಧತೆ ಪ್ರಾರಂಭಗೊಂಡಿದೆ. ಮುಂದಿನ ತಿಂಗಳಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಡಿ.ಜೆ. ಚಕ್ರವರ್ತಿ ಸಂಭಾಷಣೆಯಿದೆ. ಉಳಿದ ಮಾಹಿತಿಗಳನ್ನು ಶೀಘ್ರದಲ್ಲಿಯೇ ನೀಡುತ್ತೇನೆ’ ಎಂದಿದ್ದಾರೆ ನಾಗಶೇಖರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT