‘ಅಕ್ಷಿ’ ಸಿನಿಮಾ ನಿರ್ದೇಶಿಸಿದ್ದ ಮನೋಜ್ ಕುಮಾರ್ ಹೊಸ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ‘ಪ್ರೇಮದ ಊರಲಿ’ ಎಂಬ ಶೀರ್ಷಿಕೆ ಹೊತ್ತ ಈ ಸಿನಿಮಾದಲ್ಲಿ ಶ್ರೀರಾಮ್ ನಾಯಕನಾಗಿ ನಟಿಸಿದ್ದು, ನಟಿಯರಾದ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಜೊತೆಯಾಗಿದ್ದಾರೆ.

ಇದೊಂದು ಸಂಗೀತಮಯ ಪ್ರೇಮಕಥೆಯಾಗಿದೆ ಎಂದಿದೆ ಚಿತ್ರತಂಡ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮನೋಜ್ ಕುಮಾರ್, ‘ರಂಗಾಯಣ ರಘು ಅವರು ಈ ಸಿನಿಮಾಗೆ ಬೆಳಕು. ಅವರು ವಿಶಿಷ್ಟವಾದ ಪಾತ್ರದಲ್ಲಿ ನಟಿಸಿದ್ದಾರೆ. ಹಾಸನದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಇದು ನಾಗಣ್ಣ ಹಾಗೂ ಸಂತುವಿನ ಪುಟ್ಟ ಲೋಕ. ಊರು ಅಂದರೆ ನೂರಾರು ಮನೆಗಳು ಇರಬೇಕು ಎಂದಿಲ್ಲ. ಒಂದು ಮನೆಯಲ್ಲಿ ಎಲ್ಲರೂ ಲವಲವಿಕೆಯಿಂದ, ಖುಷಿಯಿಂದ, ಪ್ರೀತಿಯಿಂದ ಇದ್ದರೆ ಅದೇ ದೊಡ್ಡ ಊರು. ಅದೇ ‘ಪ್ರೇಮದ ಊರಲಿ’ ಕಥೆಯಾಗಿದೆ’ ಎಂದರು.

‘ತಪ್ಪುಗಳನ್ನು ಮಾಡುತ್ತಾ ಹೋಗಿ ಜೀವನ ಕಲಿಯುವ ಪಾತ್ರ ನನ್ನದು. ನನಗೆ ಹಳ್ಳಿ ಕಥೆ ಇಷ್ಟವಾಗುತ್ತದೆ. ನಾನು ಶೂಟಿಂಗ್ ಮುಗಿಸಿದ ಬಳಿಕ ಅಲ್ಲಿನ ಹಳ್ಳಿಯವನೇ ಆದೆ’ ಎಂದರು ರಂಗಾಯಣ ರಘು. ಚಿತ್ರದಲ್ಲಿ ಶ್ರೀರಾಮ್ ತಂದೆ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಸಿನಿಮಾವನ್ನು ವೆನಿಲ್ಲಾ ಎಂಟರ್ಟೇನ್ಮೆಂಟ್, ಜಾನಕಮ್ಮ ಪ್ರೊಡಕ್ಷನ್ನಡಿ ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ನಿರ್ಮಾಣ ಮಾಡಿದ್ದಾರೆ. ಸುನಾದ ಗೌತಮ್ ಸಂಗೀತ ನಿರ್ದೇಶನ, ರಾಜ್ಕಾಂತ್ ಎಸ್.ಕೆ. ಛಾಯಾಚಿತ್ರಗ್ರಹಣ, ಹರ್ಷಿತ್ ಪ್ರಭು ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.