ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿರವಾಗುತ್ತಿದ್ದಾರೆ ರ..ರ..!

Last Updated 2 ಏಪ್ರಿಲ್ 2021, 6:01 IST
ಅಕ್ಷರ ಗಾತ್ರ

ಬೆಂಗಳೂರು: ದಶಕದ ಹಿಂದೆ ಕನ್ನಡ ಚಿತ್ರರಂಗದಲ್ಲಿ ಪರಸ್ಪರ ಪೈಪೋಟಿಯಲ್ಲಿದ್ದ ನಾಯಕಿಯರು ಮೋಹಕ ತಾರೆ ರಮ್ಯಾ ಹಾಗೂ ಕ್ರೇಜಿ ಕ್ವೀನ್‌ ರಕ್ಷಿತ. ಇದೇ ಕಾರಣದಿಂದಾಗಿ ಎಣ್ಣೆ–ಸೀಗೇಕಾಯಿಯಂತಿದ್ದ ಇವರು ಕ್ರಮೇಣವಾಗಿ ಒಂದಾಗುತ್ತಿದ್ದಾರೆ.

ಚಂದನವನಕ್ಕೆ ಒಂದೇ ಅವಧಿಯಲ್ಲಿ ಪ್ರವೇಶಿಸಿದ ಈ ನಾಯಕಿಯರು, ‘ತನನಂ ತನನಂ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಮದುವೆಯಾದ ಬಳಿಕ ಸಿನಿಮಾದಿಂದ ರಕ್ಷಿತಾ ದೂರವಾದರು. ಇದೇ ಅವಧಿಯಲ್ಲಿ ಕೆಲ ಕಾಲ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ ರಮ್ಯಾ ನಂತರ ರಾಜಕೀಯಕ್ಕೆ ಧುಮುಕಿದರು. ಇವರಿಬ್ಬರೂ, ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗಷ್ಟೇ ಒಬ್ಬರನ್ನೊಬ್ಬರು ಫಾಲೋ ಮಾಡಿ ಸುದ್ದಿಯಾಗಿದ್ದರು. ಮುಂದುವರಿದು, ಇದೀಗ ರಕ್ಷಿತಾ ಅವರ ಜನ್ಮದಿನಕ್ಕೆ ರಮ್ಯಾ ವಿಶೇಷವಾಗಿ ಶುಭಕೋರಿದ್ದಾರೆ.

ಫೇಸ್‌ಬುಕ್‌ನಲ್ಲಿ ರಕ್ಷಿತಾ ಜೊತೆಗಿರುವ ಫೋಟೊ ಅಪ್‌ಲೋಡ್‌ ಮಾಡಿರುವ ರಮ್ಯಾ, ‘ಜನ್ಮದಿನದ ಶುಭಾಶಯಗಳು ರಕ್ಷಿತಾ. ನನ್ನ ಸಿನಿಮಾ ಪಯಣವು ನೀನಿಲ್ಲದೆ ಅಪೂರ್ಣ. ಅದರಲ್ಲಿ ಖುಷಿಯೂ ಇತ್ತು ಡ್ರಾಮಾ ಕೂಡ ಇತ್ತು. ನನ್ನ ಕಡೆಯಿಂದ ಪ್ರೀತಿಪೂರ್ವಕವಾದ ಶುಭಾಶಯ’ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT