ಶನಿವಾರ, ಮಾರ್ಚ್ 25, 2023
27 °C

ದಾವಣಗೆರೆ: ಬೆಣ್ಣೆ ದೋಸೆ ರುಚಿಗೆ ಮನಸೋತ ರಮ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮೋಹಕ ತಾರೆ ನಟಿ ರಮ್ಯಾ ಇಲ್ಲಿನ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್‌ನಲ್ಲಿ ಸೋಮವಾರ ದೋಸೆ ಸವಿದರು.

ಭಾನುವಾರ ಸಂಜೆ ನಡೆದ ‘ಹೆಡ್ ಬುಷ್’ ಸಿನಿಮಾ ಪ್ರಿ ರಿಲೀಸ್ ವೇಳೆ ‘ನನಗೆ ಬೆಣ್ಣೆದೋಸೆ ಅಂದರೆ ಇಷ್ಟ. ನಾನು ಡಯಟ್‌ನಲ್ಲಿದ್ದರೂ ಬೆಣ್ಣೆದೋಸೆ ತಿನ್ನುತ್ತೇನೆ. ಯಾವ ಹೊಟೇಲ್‌ನಲ್ಲಿ ರುಚಿ ಚೆನ್ನಾಗಿರುತ್ತೆ ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದ ವೇಳೆ ಕೊಟ್ಟೂರೇಶ್ವರ ಹೋಟೆಲ್‌ಗೆ ಹೋಗುವಂತೆ ಸಲಹೆ ನೀಡಿದ್ದರು.

ಅಭಿಮಾನಿಗಳ ಸಲಹೆಯಂತೆ ಸೋಮವಾರ ಬೆಳಿಗ್ಗೆ ಒಂದು ಬೆಣ್ಣೆ ದೋಸೆ, ಒಂದು ಖಾಲಿ ದೋಸೆಯನ್ನು ತಿಂದು ಅದರ ರುಚಿಗೆ ಮನಸೋತರು. ‘ಟೇಸ್ಟ್ ಸೂಪರ್ ಆಗಿದೆ’ ಎಂದು ಪ್ರತಿಕ್ರಿಯಿಸಿದರು.

ತಿಂಡಿ ತಿಂದ ಬಳಿಕ ‘ಪಾರ್ಸೆಲ್‌ ತೆಗೆದುಕೊಂಡು ಹೋದರೆ ಅಷ್ಟು ಮಜಾ ಇರೋದಿಲ್ಲ. ಇಲ್ಲೇ ಬಂದು ಬಿಸಿ ಇದ್ದಾಗಲೇ ತಿನ್ನಬೇಕು. ನನಗಂತೂ ತುಂಬಾ ಇಷ್ಟವಾಯಿತು. ಹಳ್ಳಿಯ ಬೆಣ್ಣೆ ಬಳಸಿ ದೋಸೆ ಮಾಡುತ್ತಾರೆ, ಪ್ಯಾಕೆಟ್ ಬೆಣ್ಣೆಯನ್ನು ಉಪಯೋಗಿಸುವುದಿಲ್ಲ. ಚಟ್ನಿಯೂ ಚೆನ್ನಾಗಿದೆ‘ ಎಂದು ರಮ್ಯಾ ಹೇಳಿದರು.

‘ಇದು ನಮ್ಮ ಊಟ, ನಮ್ಮ ನಾಡು, ಜನ, ಸಂಸ್ಕೃತಿ ಬೆಳೆದಷ್ಟೂ ಸಂತೋಷವಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ರೈತರು, ವರ್ತಕರು ಎಲ್ಲರೂ ಸಂಕಷ್ಟ ಅನುಭವಿಸಿದರು. ಅವರಿಗೆ ಅನುಕೂಲವಾಗುವುದಾದರೆ ಅವರಿಗೆ ಪ್ರಚಾರ ಮಾಡುತ್ತೇನೆ’ ಎಂದು ತಿಳಿಸಿದರು.

ರಮ್ಯಾ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ನೋಡಲು ಹೋಟೆಲ್‌ನತ್ತ ಮುಗಿಬಿದ್ದರು. ಜತೆಯಲ್ಲಿ ನಿಂತು ಸೆಲ್ಫಿ ತೆಗೆದುಕೊಂಡರು. ಹೋಟೆಲ್ ಮುಂದೆ ಜನರು ಜಮಾಯಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಿದರು. ಸಂಚಾರ ವ್ಯವಸ್ಥೆ ನಿಯಂತ್ರಿಸಲು ಪೊಲೀಸರು ಪ್ರಯಾಸಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು