‘ಸಿಟಿ ಲೈಟ್ಸ್’ ಪ್ರಾಜೆಕ್ಟ್ ಸಿಕ್ಕಿದ್ದು ಹೇಗೆ?

‘ಪೆಪೆ’ ಸಿನಿಮಾದ ಬಿಡುಗಡೆ ವೇಳೆ ವಿಜಯ್ ಅವರ ಜೊತೆ ಮಾತುಕತೆಗಾಗಿ ಸಕಲೇಶಪುರಕ್ಕೆ ಹೋಗಿದ್ದೆ. ಅಲ್ಲಿ ವಿಜಯ್ ಈ ಕಥೆಯ ಸಾರಾಂಶ ಹೇಳಿದ್ದರು. ಅದು ನನ್ನನ್ನು ಸೆಳೆಯಿತು. ಬೆಂಗಳೂರಿನಲ್ಲಿ ನಡೆಯುವ ಕಥೆ ಸಿನಿಮಾದಲ್ಲಿದೆ.

ನಿರ್ದೇಶಕರಾಗಿ ವಿಜಯ್ ಅವರನ್ನು ಕಂಡ ಬಗೆ...

ವಿಜಯ್ ಅವರ ಪರಿಚಯ ‘ದುನಿಯಾ’ ಸಿನಿಮಾದಿಂದಲೂ ಇದೆ. ವಿಜಯ್ ಅವರ ಕೆಲಸ ಮಾಡುವ ಶೈಲಿ ಭಿನ್ನವಾಗಿದೆ. ನಾನು ಯಾವುದೇ ಹೆಚ್ಚಿನ ಪೂರ್ವತಯಾರಿ ಇಲ್ಲದೆ ಚಿತ್ರೀಕರಣಕ್ಕೆ ಹೋಗಿದ್ದೆ. ಕಥೆಯನ್ನಷ್ಟೇ ತಲೆಯಲ್ಲಿಟ್ಟುಕೊಳ್ಳಲು ಹೇಳಿದ್ದರು. ಶೂಟಿಂಗ್ ಸ್ಥಳದಲ್ಲೇ ಬದಲಾವಣೆ, ಸುಧಾರಣೆ ತರುವ ಸೃಜನಶೀಲ ನಿರ್ದೇಶಕ ಅವರು. ಇದು ಅವರ ನಿರ್ದೇಶನದ ಮೂರನೇ ಸಿನಿಮಾ. ನಟನಾಗಿಯೂ ಪಳಗಿದವರು. ನಮ್ಮಿಂದ ನಟನೆ ಹೇಗೆ ಹೊರತೆಗೆಯಬೇಕು ಎನ್ನುವುದು ಅವರಿಗೆ ತಿಳಿದಿದೆ. ಅವರ ಜೊತೆ ಕೆಲಸ ಮಾಡುವುದು ಬಹಳ ಸುಲಭ.

ಕಾಲೇಜು ದಿನಗಳಲ್ಲಿ ಬೆಂಗಳೂರನ್ನು ಸುತ್ತಿದ್ದೆ. ಆದರೆ ವಿಜಯ್ ಅವರು ತೋರಿಸಿದ ಬೆಂಗಳೂರು ನನಗೆ ಈ ನಗರದ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಿದೆ. ಕತ್ತಲಾದ ಬಳಿಕ ಬೆಂಗಳೂರು ಹೇಗಿರುತ್ತದೆ, ಅಲ್ಲಿ ಏನೇನು ನಡೆಯುತ್ತದೆ ಎನ್ನುವುದೇ ಚಿತ್ರದ ಕಥೆ.

‘ಬಾವ ಬಾವ’ ಹಾಡು ಬಹಳ ಕ್ಯಾಚಿಯಾಗಿದೆ. ರ್ಯಾಪ್ ಶೈಲಿಯಲ್ಲಿ ಈ ಹಾಡಿದ್ದು, ಸಿನಿಮಾದ ಉಳಿದ ಐದು ಹಾಡುಗಳು ಭಿನ್ನ ಶೈಲಿಯಲ್ಲಿವೆ. ಮೊಲೊಡಿ ಹಾಡೂ ಇದೆ. ನನಗೆ ಮೆಲೊಡಿ ಹಾಡುಗಳು, ಹಿಂದೂಸ್ತಾನಿ ಹಾಡುಗಳು ಬಹಳ ಇಷ್ಟ.

ಹೊಸ ಹೊಸ ಪಾತ್ರಗಳ ಪ್ರಯೋಗದ ಬಗ್ಗೆ...

ನಿರ್ದೇಶಕರು ನನ್ನನ್ನು ಭಿನ್ನ ಪಾತ್ರಗಳಲ್ಲಿ ನೋಡಲು ಬಯಸಿ ಕಥೆ ಬರೆಯುತ್ತಿದ್ದಾರೆ, ತರುತ್ತಿದ್ದಾರೆ ಎನ್ನುವುದು ಖುಷಿಯ ವಿಷಯ. ಭಿನ್ನವಾದ ಕಥೆಯೊಂದಿಗೆ ನನ್ನನ್ನು ಭೇಟಿಯಾಗಬಹುದು ಎನ್ನುವ ನಂಬಿಕೆ ಹೊಸ ನಿರ್ದೇಶಕರಿಗೂ ಮೂಡಿದೆ. ನಾನು ಕಥೆಯನ್ನು ಬಹಳ ಸೂಕ್ಷ್ಮವಾಗಿ ಕೇಳುವಾತ. ಆ ಕಥೆಯೊಂದಿಗೆ ಬಹಳ ಸಮಯ ಕಳೆಯುತ್ತೇನೆ. ಪಾತ್ರದ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತೇನೆ. ಸಿನಿಮಾಗೆ ಹೇಗೆ ಬೇಕೋ ಹಾಗೆ ನನ್ನ ಮನಃಸ್ಥಿತಿ, ದೈಹಿಕ ಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳುತ್ತಿರುತ್ತೇನೆ. ‘ಸಿಟಿ ಲೈಟ್ಸ್’ನಲ್ಲಿ ಒಂದು ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.

ಬಹಳಷ್ಟು ಕಥೆಗಳು ಬರುತ್ತಿವೆ. ಹೊಸ ನಿರ್ದೇಶಕರು ಕಥೆಗಳನ್ನು ಹೇಳುತ್ತಿದ್ದಾರೆ. ಮಲೆನಾಡು, ಉತ್ತರ ಕರ್ನಾಟಕ ಹೀಗೆ ಕರ್ನಾಟಕದ ಎಲ್ಲಾ ಪ್ರದೇಶಗಳಿಂದ ಕಥೆಗಳು ಬರುತ್ತಿವೆ. ನನಗೆ ಮಣ್ಣಿಗೆ ಹತ್ತಿರವಾಗಿರುವ ಕಥೆಗಳು ಬಹಳ ಇಷ್ಟ. ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದೇನೆ. ಇದರಲ್ಲಿ ದೈಹಿಕವಾಗಿಯೂ ಕೊಂಚ ಬದಲಾವಣೆ ಇರಲಿದೆ. ಪರಭಾಷೆಗಳಿಂದ ಯಾವುದೇ ಕಥೆ ಬಂದಿಲ್ಲ. ಕಥೆಗಳು ಖುಷಿ ನೀಡಿದರಷ್ಟೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತೇನೆ. ನಾನು ಒಂದು ಸಿನಿಮಾ ಪೂರ್ಣಗೊಳಿಸಿದ ಬಳಿಕವೇ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತೇನೆ.

ಸದ್ಯಕ್ಕೆ ಈ ವರ್ಷದಲ್ಲೇ ‘ಗ್ರಾಮಾಯಣ’ ಹಾಗೂ ‘ಸಿಟಿ ಲೈಟ್ಸ್’ ಬಿಡುಗಡೆ ಆಗಲಿದೆ. ಜೂನ್ನಲ್ಲಿ ‘ಗ್ರಾಮಾಯಣ’ ಬರಲಿದೆ. ‘ಮರ್ಫಿ’ ನಿರ್ದೇಶಿಸಿದ್ದ ಬಿ.ಎಸ್.ಪಿ. ವರ್ಮಾ ನಿರ್ದೇಶನದ ‘ಮಾಚಿಸ್’ ನನ್ನ ಮುಂದಿನ ಸಿನಿಮಾ. ಜುಲೈನಲ್ಲಿ ಇದರ ಚಿತ್ರೀಕರಣ ಆರಂಭವಾಗಲಿದೆ. ಇದೇ ರೀತಿ ವರ್ಷಕ್ಕೆ 2–3 ಸಿನಿಮಾ ಮಾಡುವ ಗುರಿ ನನ್ನದು. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಸಹೋದರ ಯುವ ಜೊತೆಯೂ ಒಂದು ಸಿನಿಮಾ ಮಾಡಲಿದ್ದೇನೆ.

‘ಭಯ ಪಟ್ಟಿಲ್ಲ, ಪಡೋದೂ ಇಲ್ಲ’

‘ಮೊದಲು ಕನ್ನಡ ಸಿನಿಮಾವನ್ನು ಚೆನ್ನಾಗಿ ಮಾಡಿ ಅದನ್ನು ನಿಲ್ಲಿಸಿಕೊಂಡು ಆಮೇಲೆ ಪ್ಯಾನ್ ಇಂಡಿಯಾ ಮಾಡೋಣ ಎನ್ನುವುದು ನನ್ನ ಆಸೆ. ಅದು ಬಿಟ್ಟು ಭಯವಿಲ್ಲ, ಪಡೋದೂ ಇಲ್ಲ....’

ಇದು ‘ಸಿಟಿ ಲೈಟ್ಸ್’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಮಾತು.

‘ಮನಸ್ಸು ಮಾಡಿದರೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಬಹುದು. ಮಾಡಲು ಬರುವುದಿಲ್ಲವೆಂದೂ ಅಲ್ಲ. ಸಮಯ ಬಂದಾಗ, ಕಥೆ ಸಿಕ್ಕಾಗ ಖಂಡಿತಾ ಮಾಡಲಿದ್ದೇನೆ. ಮೊದಲು ನಮ್ಮ ಕಥೆಗಳನ್ನು ಹೇಳುವುದಕ್ಕೆ ಆದ್ಯತೆ ನೀಡಿದ್ದೇನೆ’ ಎಂದಿದ್ದಾರೆ ವಿಜಯ್.

‘ಸಿಟಿ ಲೈಟ್ಸ್ ಸಿನಿಮಾದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದೇನೆ. ಹಾಡಿನಲ್ಲಿ ನನ್ನದೇ ಊರಿನ(ಆನೇಕಲ್) ಭಾಷೆ ಬಳಸಿದ್ದೇನೆ. ಆನೇಕಲ್ನ ಅಂಕಿತ್ ಈ ಹಾಡನ್ನು ಬರೆದಿದ್ದಾರೆ, ಹಾಡಿದ್ದಾರೆ. ಝೆನ್–ಜಿಗಳಿಗೆ ರ್ಯಾಪ್ ಹಾಡುಗಳು ಬಹಳ ಇಷ್ಟ. ನೋವನ್ನು ಹೇಳಿಕೊಳ್ಳುವುದಕ್ಕೆ ಹುಟ್ಟಿದ್ದು ಈ ರ್ಯಾಪ್. ಅದೊಂದು ಕ್ರಾಂತಿ. ನಗರದಲ್ಲಿರುವ ನೋವನ್ನು ಈ ಹಾಡಿನ ಮೂಲಕ ಹೇಳಿದ್ದೇನೆ’ ಎನ್ನುತ್ತಾರೆ ವಿಜಯ್.

‘ಈ ಸಿನಿಮಾ ಮೂಲಕ ನೋವಿನ ವಿಷಯವೊಂದನ್ನು ಹೇಳುತ್ತಿದ್ದೇನೆ. ನಗರದಲ್ಲಿ ಸಂಜೆ ಬಳಿಕ ಲೈಟ್ಸ್ ಹಾಕಿದ ಮೇಲೆ ಇರುವ ಜೀವನವನ್ನು ಹೇಳುತ್ತಿದ್ದೇನೆ. ಇದರ ಹಿಂದೆ ಯಾರಿದ್ದಾರೆ, ಮುಂದೆ ಎಲ್ಲಿಯವರೆಗೂ ಹೋಗುತ್ತದೆ ಎನ್ನುವುದೇ ಚಿತ್ರದ ಕಥೆ. ನಾನು ನೋಡಿರುವ ಒಂದು ಲೋಕವಿದು. ಸಾಕಷ್ಟು ಅಧ್ಯಯನ ಮಾಡಿ ಕಥೆ ಮಾಡಿಕೊಂಡಿದ್ದೇನೆ. ಅಮಾಯಕರಿಗೆ, ಮೋಸ ಮಾಡುವವರಿಗೆ ಬೆಂಗಳೂರು ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳಿದ್ದೇನೆ. ನಾನು ಬೇರೆಯವರಿಗೆ ನಿರ್ದೇಶನ ಮಾಡಬೇಕು ಎನ್ನುವ ಆಸೆಯ ಫಲ ಈ ಸಿನಿಮಾ. ಈ ಸಿನಿಮಾದಲ್ಲಿ ನಾನು ಇರಲಿದ್ದೇನೆಯೇ ಎನ್ನುವುದು ಸರ್ಪ್ರೈಸ್’ ಎಂದಿದ್ದಾರೆ ವಿಜಯ್.

‘ಝೆನ್–ಜಿಗಳನ್ನು ಗುರಿಯಾಗಿಸಿಕೊಂಡು ಸಿನಿಮಾ ಮಾಡಿದರೆ ಅದು ಯಶಸ್ವಿ ಆಗಬಹುದು. ಇದು ನನ್ನದೊಂದು ಪ್ರಯತ್ನ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.