ಭಾನುವಾರ, ಸೆಪ್ಟೆಂಬರ್ 27, 2020
27 °C

ಭದ್ರಾ ಜಲಾಶಯ ವೀಕ್ಷಿಸಿದ ನಟ ದರ್ಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ/ಭದ್ರಾವತಿ: ನಟ ದರ್ಶನ್ ಶನಿವಾರ ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದರು. ಎರಡು ದಿನ ಅವರು ಅಲ್ಲೇ ವಾಸ್ತವ್ಯ ಮಾಡುವರು.

ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ಅವರು, ಶಿವಮೊಗ್ಗಕ್ಕೆ ಶುಕ್ರವಾರ ಸಂಜೆಯೇ ಬಂದಿದ್ದ ಅವರು ಶನಿವಾರ ಜಲಾಶಯ ವೀಕ್ಷಿಸಿದರು. ಭದ್ರಾ ಅಭಯಾರಣ್ಯದಲ್ಲಿ ಕೆಲವು ಸಮಯ ಸಫಾರಿ ಹೋಗಿದ್ದರು. ವನ್ಯಜೀವಿಗಳ ಅಪರೂಪದ ಚಿತ್ರಗಳನ್ನು ಕ್ಲಿಕ್ಕಿಸಿದರು. ಅವರಿಗೆ ಮತ್ತೊಬ್ಬ ನಟ ಚಿಕ್ಕಣ್ಣ ಸಾಥ್ ನೀಡಿದರು. ನಂತರ ಅರಣ್ಯದಲ್ಲಿರುವ ಬ್ರಿಟಿಷರ ಕಾಲದ ನಿರೀಕ್ಷಣಾ ಮಂದಿರದಲ್ಲಿ ತಂಗಿದರು.

ದರ್ಶನ್ ಬಂದಿರುವ ಸುದ್ದಿ ಹರಡುತ್ತಿದ್ದಂತೆ ಜನರು ತಂಡೋಪತಂಡವಾಗಿ ಬಂದು ನೆಚ್ಚಿನ ನಟನ ಜತೆ ಫೋಟೊ ಕ್ಲಿಕ್ಕಿಸಿಕೊಂಡರು. ಹಲವರು ಮಾಸ್ಕ್ ಧರಿಸದೇ ಬಂದದ್ದು ಅವರಿಗೆ ಕಿರಿಕಿರಿ ಉಂಟು ಮಾಡಿತು. ನಂತರ ಪೊಲೀಸರು ಬಂದೋಬಸ್ತ್ ಕಲ್ಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು