ನವದೆಹಲಿ: ‘ಕೆಡಿ: ದಿ ಡೆವಿಲ್’ ಚಿತ್ರದಲ್ಲಿದ್ದ ವಿವಾದಿತ ಹಾಡಿಗೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಸೋಮವಾರ ವಿಚಾರಣೆಗೆ ಹಾಜರಾದ ನಟ ಸಂಜಯ್ ದತ್ ಅವರು ಲಿಖಿತವಾಗಿ ಕ್ಷಮೆ ಯಾಚಿಸಿದ್ದಾರೆ.

ಉದ್ದೇಶಪೂರ್ವಕವಲ್ಲದ ತಪ್ಪಿನಿಂದ ಸಮಾಜಕ್ಕೆ ಆಗಿರುವ ಹಾನಿಗೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿರುವ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗಲು ಒಪ್ಪಿಕೊಂಡಿದ್ದಾರೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ವಿಜಯ ರಾಹಟ್ಕರ್ ಅವರು, ಹಾಡಿನಲ್ಲಿ ಮಹಿಳೆಯರನ್ನು ಆಶ್ಲೀಲ, ಅಸಂಬದ್ಧವಾಗಿ ವರ್ಣಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಭವಿಷ್ಯದಲ್ಲಿ ಸಿನಿಮಾ ಮತ್ತು ಸಂಬಂಧಿತ ಕಾರ್ಯಕ್ರಮಗಳಲ್ಲಿ ಮಹಿಳೆ, ಮಕ್ಕಳ ಘನತೆಯನ್ನು ಖಚಿತಪಡಿಸಿಕೊಂಡು ಒಪ್ಪಂದ ಮಾಡಿ ಕೊಳ್ಳುವುದಾಗಿ ಸಂಜಯ್ ಭರವಸೆ ನೀಡಿದ್ದಾರೆ. ನಟಿ ನೋರಾ ಫತೇಹಿ ಅವರಿಗೂ ಆಯೋಗ ಸಮನ್ಸ್ ನೀಡಿದ್ದು, ಪ್ರಸ್ತುತ ವಿದೇಶದಲ್ಲಿರುವ ಅವರು ವಿಚಾರಣೆಗೆ ಬೇರೆ ದಿನ ನಿಗದಿಪಡಿಸು ವಂತೆ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಚಿತ್ರದ ನಿರ್ದೇಶಕ ಪ್ರೇಮ್ ಅವರು ಏಪ್ರಿಲ್ 6ರಂದು ಆಯೋಗದ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.