ಅಪ್ಪನ ನೆನಪಿನಲ್ಲಿ ಸಾರಾ

ಮಂಗಳವಾರ, ಜೂಲೈ 16, 2019
23 °C
ಸಾರಾ ಅಲಿ ಖಾನ್

ಅಪ್ಪನ ನೆನಪಿನಲ್ಲಿ ಸಾರಾ

Published:
Updated:
Prajavani

ಮೊನ್ನೆಯಷ್ಟೇ ನಡೆದ ಅಪ್ಪನ ದಿನಾಚರಣೆ ಸಂದರ್ಭದಲ್ಲಿ ಸಾರಾ ಅಲಿ ಖಾನ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಅಪ್ಪ ಸೈಫ್ ಅಲಿ ಖಾನ್ ಜೊತೆಗಿನ ತಮ್ಮ ಬಾಲ್ಯದ ಅಪರೂಪದ ಫೋಟೊಗಳನ್ನು ಹಂಚಿಕೊಂಡಿದ್ದಾಳೆ.

ಕಪ್ಪು–ಬಿಳುಪು ಚಿತ್ರಗಳಲ್ಲಿ ಸಾರಾ ಮುದ್ದುಮುದ್ದಾಗಿ ಕಾಣುತ್ತಿದ್ದು, ಅಪ್ಪನ ಜೊತೆ ಕಳೆದ ಆತ್ಮೀಯ ಬಾಂಧವ್ಯದ ಕ್ಷಣಗಳು ನೋಡುಗರನ್ನು ಭಾವುಕ ಲೋಕಕ್ಕೆ ಕರೆದೊಯ್ಯುವಂತಿವೆ. ‌

‘ಹ್ಯಾಪಿ ಫಾದರ್ಸ್ ಡೇ ಅಬ್ಬಾ. ಸದಾ ಕಾಲ ನನ್ನೊಂದಿಗೆ ಇದ್ದದ್ದಕ್ಕೆ ಧನ್ಯವಾದ. ರಜೆಯ ದಿನಗಳಲ್ಲಿ ನನ್ನ ಜೊತೆಗಿದದ್ದಕ್ಕೆ, ಹೇಗೆ ಓದಬೇಕೆಂದು ಹೇಳಿಕೊಟ್ಟಿದ್ದಕ್ಕೆ, ಮೊದಲ ಮಳೆ ಮತ್ತು ಹಿಮವನ್ನು ನನಗೆ ತೋರಿಸಿದ್ದಕ್ಕೆ... ಸ್ಪಾಗೆಟ್ಟಿಯನ್ನು ಹೇಗೆ ತಿನ್ನಬೇಕೆಂದು ಹೇಳಿಕೊಟ್ಟಿದ್ದಕ್ಕೆ... ಧನ್ಯವಾದ, ನಿಮ್ಮ ತಾಳ್ಮೆ ಮತ್ತು ಪ್ರೀತಿಗೆ...’ ಎಂದು ಸಾರಾ ಭಾವುಕವಾಗಿ ಬರೆದಿದ್ದಾರೆ. 

Post Comments (+)