ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕಿನಿಯಲ್ಲಿ ತಮ್ಮನ ಜೊತೆ ಪೋಸ್‌: ಸಾರಾಗೆ ನೆಟ್ಟಿಗರಿಂದ ಹಿಗ್ಗಾ ಮುಗ್ಗಾ ತರಾಟೆ

Last Updated 6 ಮಾರ್ಚ್ 2020, 6:34 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ಸಾರಾ ಅಲಿಖಾನ್‌ ಬಿಕಿನಿ ಉಡುಗೆಯಲ್ಲಿ ಸಹೋದರನ ಜೊತೆ ಪೋಸ್‌ ನೀಡಿದ್ದಕ್ಕೆ ನೆಟ್ಟಿಗರು ಆಕ್ರೊಶ ವ್ಯಕ್ತಪಡಿಸಿದ್ದು ಸಾರಾ ವಿರುದ್ಧ ಕಿಡಿಕಾರಿದ್ದಾರೆ.

ಹೌದು, ಸಾರಾ ಅಲಿಖಾನ್‌ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

ಯಾವುದೇ ನಟಿಯರು ಬೀಚ್‌ ಉಡುಪಿನಲ್ಲಿ ಪೋಸ್‌ ಕೊಟ್ಟರೆ ಮೆಚ್ಚಿಕೊಳ್ಳುವ ಅಭಿಮಾನಿಗಳೇ ಹೆಚ್ಚು. ಆದರೆ ಸಾರಾ ವಿರುದ್ಧ ಮಾತ್ರ ನೆಟ್ಟಿಗರು ಗರಂ ಆಗಿರುವುದಕ್ಕೆ ಕಾರಣವಿದೆ. ಸಾರಾ ಬಿಕಿನಿ ಉಡುಪಿನಲ್ಲಿ ತಮ್ಮನ ಜೊತೆ ಪೋಸ್‌ ನೀಡಿರುವುದೇನೆಟ್ಟಿಗರ ಅಸಮಾಧಾನಕ್ಕೆ ಕಾರಣ!

ಮಾರ್ಚ್‌ 3 ಸಹೋದರ ಇಬ್ರಾಹಿಂ ಅಲಿ ಖಾನ್ ಜನ್ಮದಿನ. ಆ ದಿನದಂದು ತಮ್ಮನ ಜೊತೆ ಇರಲು ಸಾಧ್ಯವಾಗಲಿಲ್ಲ ಎಂದು ಸಾರಾ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದರ ಜೊತೆಗೆ ಮುದ್ದು ತಮ್ಮನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಬರ್ತ್‌ಡೇ ವಿಷ್‌ ಮಾಡಿದ್ದರ ಜೊತೆಗೆಮಾಲ್ಡೀವ್ಸ್‌ನಲ್ಲಿ ಕುಟುಂಬದ ಜೊತೆ ಕಾಲಕಳೆದಿದ್ದ ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದರು.

ಬಿಕಿನಿ ಉಡುಪಿನಲ್ಲಿರುವ ಹಲವು ಫೋಟೊಗಳನ್ನು ಸಾರಾ ಹಂಚಿಕೊಂಡಿದ್ದರು. ಅದೇಉಡುಪಿನಲ್ಲಿ ತಮ್ಮನ ಜೊತೆ ಫೋಸ್‌ ನೀಡಿರುವುದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ಆಫೋಟೊಗಳನ್ನು ನೋಡಿ,ಸಾರಾ ಬಾಯ್‌ಫ್ರೆಂಡ್‌ ಇರಬೇಕು ಎಂದು ಕೊಂಡೆ, ಆದರೆ ಅಡಿ ಬರಹ ನೋಡಿ ಬೇಸರವಾಯ್ತು ಎಂದು ಹಲವರು ಕಮೆಂಟ್‌ ಹಾಕಿದ್ದಾರೆ.

ದೊಡ್ಡವರು ಮಕ್ಕಳನ್ನು ಬೆಳೆಸಿದರೆ ಸಾಲದು ಸಂಸ್ಕೃತಿ ಮತ್ತುಸಂಸ್ಕಾರ ಕಲಿಸಬೇಕು ಎಂದು ಸಾರಾ ಕುಟುಂಬವನ್ನು ಕೆಲವರು ಟೀಕಿಸಿದ್ದಾರೆ.

ಕಳೆದ ಜನವರಿಯಲ್ಲಿ ತಾಯಿ ಅಮೃತಸಿಂಗ್‌, ತಮ್ಮ ಇಬ್ರಾಹಿಂ ಜೊತೆಸಾರಾಮಾಲ್ಡೀವ್ಸ್‌ಗೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT