ಗುರುವಾರ , ಜುಲೈ 29, 2021
21 °C

ವಿಡಿಯೊ | 96 ಟೂ 55 ಸಾರಾ ಫಿಟ್‌ನೆಸ್‌ ಜರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲ್ಯದಲ್ಲಿ ಬೆಣ್ಣೆ ಮುದ್ದೆ, ಗುಂಡಮ್ಮನಂತೆ ಇದ್ದ ಸಾರಾ ಅಲಿ ಖಾನ್‌ ಇಂದು ಬಾಲಿವುಡ್‌ನ ಹಾಟ್‌ ಹುಡುಗಿ. ಪುಟ್ಟ ನಡು, ಬಿಸುಪಿನ ದೇಹಾಕಾರ, ಚೂಪಾದ ಮುಖ... ಸಿನಿಮೋದ್ಯಮಕ್ಕೆ ಬೇಕಾದಂತೆ ತನ್ನ ದೇಹವನ್ನು ತಿದ್ದಿ, ತೀಡಿ ಹದಕ್ಕೆ ತಂದ ಅವರ ಶ್ರಮ ಕಡಿಮೆಯೇನಲ್ಲ. ತಮ್ಮ ಈ ಸುದೀರ್ಘ ಫಿಟ್‌ನೆಸ್‌ ಪಯಣದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

96 ಕೆ.ಜಿ ತೂಕ ಇದ್ದ ಸಾರಾ 55 ಕೆ.ಜಿ ತೂಕಕ್ಕೆ ತಮ್ಮ ದೇಹವನ್ನು ತಂದುಕೊಂಡಿದ್ದು ಹೇಗೆ? ಇದಕ್ಕೆ ತಾವೆಷ್ಟು ವರ್ಕ್‌ಔಟ್‌ ಮಾಡಿದ್ದರು ಎಂಬುದನ್ನು ವಿಡಿಯೊದಲ್ಲಿ ತೋರಿಸಿದ್ದಾರೆ. ಜೊತೆಗೆ ಈ ವರ್ಕ್‌ಔಟ್‌ನಲ್ಲಿ ತಮ್ಮೊಂದಿಗೆ ಜೋಡಿಯಾದ ಸಹೋದರ ಇಬ್ರಾಹಿಂ ಹಾಗೂ ಗೆಳತಿಯರ ಫೋಟೊ, ವಿಡಿಯೊ ಕೂಡ ಇದೆ.

ಕಾರ್ಡಿಯೊ, ಈಜು, ಸೈಕ್ಲಿಂಗ್ ಹೀಗೆ ಹಲವು ವಿಧಗಳಲ್ಲಿ ವರ್ಕ್‌ಔಟ್‌ ಮಾಡಿದ ವಿಡಿಯೊ ಇದೆ. ಸಮಯ ಹಾಳು ಮಾಡದೆ ಮನೆಯಲ್ಲೂ ದಣಿಯುವ ಹಟಕ್ಕೆ ಬಿದ್ದವರಂತೆ ಸಹೋದರನೊಂದಿಗೆ ವ್ಯಾಯಾಮ ಮಾಡಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್‌ ಕೋಚಿಂಗ್ ತೆಗೆದುಕೊಂಡು ದೇಹ ದಂಡಿಸಿದ್ದಾರೆ. ಅವರ ಫಿಟ್‌ನೆಸ್‌ಗೆ ಗುರುವಿನಿಂದ ಶಭಾಷ್‌ಗಿರಿ ಪಡೆದಿದ್ದಾರೆ.

 
 
 
 

 
 
 
 
 
 
 
 
 

Episode 2: From Sara ka Sara to Sara ka aadha 🎃

A post shared by Sara Ali Khan (@saraalikhan95) on

ವಿಡಿಯೊ ಪೋಸ್ಟ್‌ ಮಾಡಿ ‘ನಮಸ್ತೆ, ಈ ಬದಲಾವಣೆ ನೋಡಿ’ ಎಂದಿದ್ದಾರೆ. ಇವರ ವಿಡಿಯೊಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ನೀವು ಎಲ್ಲರಿಗೂ ಸ್ಫೂರ್ತಿ’ ಎಂದು ಹೊಗಳಿದ್ದಾರೆ.

ಸಂದರ್ಶನವೊಂದರಲ್ಲಿ ತಮ್ಮ ಫಿಟ್‌ನೆಸ್‌ ಪಯಣದ ಬಗ್ಗೆ ಹೇಳಿಕೊಂಡಿರುವ 23 ವರ್ಷದ ಚೆಲುವೆ ಸಾರಾ ‘ನ್ಯೂಯಾರ್ಕ್‌ನಲ್ಲಿ ಓದುವಾಗ 96 ಕೆ.ಜಿ ಇದ್ದೆ. ಈ ಹೆಚ್ಚುವರಿ ತೂಕ ಕಡಿಮೆ ಮಾಡಲು ಒಂದು ವರ್ಷ ನಿರಂತರವಾಗಿ ದೇಹ ದಂಡಿಸಿದೆ. ಪಿಜ್ಜಾದಿಂದ ಸಲಾಡ್‌ ತಿನ್ನುವ ಆರೋಗ್ಯಕರ ಅಭ್ಯಾಸ ಮಾಡಿಕೊಂಡಿದ್ದೇನೆ’ ಎಂದಿದ್ದಾರೆ.

ಗೋವಿಂದ್‌, ಕರೀಷ್ಮಾ ಕಪೂರ್ ಅಭಿನಯಿಸಿದ ‘ಕೂಲಿ ನಂಬರ್ 1’ ಸಿನಿಮಾದ ಹೆಸರನ್ನೇ ಇಟ್ಟುಕೊಂಡು ಮಾಡುತ್ತಿರುವ ಸಿನಿಮಾದಲ್ಲಿ ಸಾರಾ ಅಲಿ ಖಾನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ವರುಣ್‌ ಧವನ್ ಇವರ ಜೋಡಿ. ಡೇವಿಡ್ ಧವನ್ ನಿರ್ದೇಶನವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು