ಶುಕ್ರವಾರ, ಡಿಸೆಂಬರ್ 6, 2019
22 °C

‘ಸತ್ತೇ ಪೆ ಸತ್ತಾ’ ರಿಮೇಕ್‌ನಲ್ಲಿ ಅನುಷ್ಕಾ

Published:
Updated:
Prajavani

‘ಸತ್ತೇ ಪೆ ಸತ್ತಾ’ ರಿಮೇಕ್‌ನಲ್ಲಿ ನಟಿ ಅನುಷ್ಕಾ ಶರ್ಮ ನಟಿಸಲಿದ್ದಾರೆ. 

ಅಮಿತಾಭ್‌ ಬಚ್ಚನ್‌ ಹಾಗೂ ಹೇಮಮಾಲಿನಿ ಅಭಿನಯದ ಈ ಚಿತ್ರದ ರಿಮೇಕ್‌ನ್ನು ರೋಹಿತ್ ಶೆಟ್ಟಿ ಹಾಗೂ ಫರ್‍ಹಾ ಖಾನ್‌ ಮಾಡುತ್ತಿದ್ದಾರೆ. ಮೂಲಚಿತ್ರದಲ್ಲಿ ಅಮಿತಾಭ್‌ ನಿರ್ವಹಿಸಿದ ಪಾತ್ರವನ್ನು ನಟ ಹೃತಿಕ್‌ ರೋಷನ್‌ ಮಾಡಲಿದ್ದಾರೆ. 

ಈಗ ಹೇಮಾಮಾಲಿನಿ ನಿರ್ವಹಿಸಿದ ಪಾತ್ರಕ್ಕಾಗಿ ಚಿತ್ರತಂಡ ಅನುಷ್ಕಾ ಶರ್ಮ ಅವರನ್ನು ಭೇಟಿಯಾಗಿದೆ. ಚಿತ್ರದ ಮಾತುಕತೆ ಇನ್ನೂ ಆರಂಭಿಕ ಹಂತದಲ್ಲಿದೆ. ಈ ಚಿತ್ರವನ್ನು ರಿಮೇಕ್‌ ಮಾಡುವ ವಿಷಯ ಕೇಳಿ ಅನುಷ್ಕಾ ಸಂತಸ ವ್ಯಕ್ತಪಡಿಸಿದ್ದು, ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಈ ಪಾತ್ರಕ್ಕಾಗಿ ದೀಪಿಕಾ ಪಡುಕೋಣೆ ಅವರ ಜೊತೆ ಮಾತುಕತೆ ನಡೆಸಿದ್ದರು. ಆದರೆ ಅವರು ನಿರಾಕರಿಸಿದ್ದರೆನ್ನಲಾಗಿದೆ. 

‘ಜೀರೊ’ ಅನುಷ್ಕಾ ನಟನೆಯ ಕೊನೆಯ ಚಿತ್ರ. ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು