ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಮಗುವಿಗೆ ಜನ್ಮ ನೀಡಿದ ಹಾಲಿವುಡ್‌ ನಟಿ ಸ್ಕಾರ್ಲೆಟ್‌

Last Updated 19 ಆಗಸ್ಟ್ 2021, 6:33 IST
ಅಕ್ಷರ ಗಾತ್ರ

ಹಾಲಿವುಡ್‌ ನಟಿ ಸ್ಕಾರ್ಲೆಟ್‌ ಜಾನ್ಸನ್‌ ಗಂಡು ಮಗಿವಿಗೆ ಜನ್ಮ ನೀಡಿದ್ದಾರೆ.

ಈ ಸಂತಸದ ಸುದ್ದಿಯನ್ನು ಪತಿ ಕಾಲಿನ್ ಜೊಸ್ಟ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಹಂಚಿಕೊಂಡಿದ್ದಾರೆ.ಸ್ಕಾರ್ಲೆಟ್‌ ಗಂಡು ಮಗುವಿಗೆ ಜನ್ಮ ನೀಡಿದ್ದು ನನಗೆ ಸಂತಸವಾಗಿದೆ. ಮಗುವಿಗೆ ಕಾಸ್ಮೊ ಎಂದು ನಾಮಕರಣ ಮಾಡಲಾಗಿದೆ ಎಂದು ಅವರುಬರೆದುಕೊಂಡಿದ್ದಾರೆ.

2018-2019ರಲ್ಲಿಸ್ಕಾರ್ಲೆಟ್‌ ಹಾಲಿವುಡ್‌ನಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯಾಗಿದ್ದಾರೆ. ಸ್ಕಾರ್ಲೆಟ್‌ಗೆ ಈಗಾಗಲೇ 6 ವರ್ಷದ ಹೆಣ್ಣು ಮಗು ಇದೆ. ಸ್ಕಾರ್ಲೆಟ್‌ ಅವರು ಫ್ರೆಂಚ್‌ ಮೂಲದ ಮೊದಲ ಪತಿಗೆ ವಿಚ್ಛೇದನ ನೀಡಿ ಕಾಲಿನ್‌ ಅವರನ್ನು ಎರಡನೇ ಮದುವೆಯಾಗಿದ್ದಾರೆ.

ಸ್ಕಾರ್ಲೆಟ್‌ ಮತ್ತು ಕಾಲಿನ್‌ ಜೋಡಿ 2020ರ ಜನವರಿಯಲ್ಲಿ ಮದುವೆಯಾಗಿದ್ದರು.

ಬ್ಲ್ಯಾಕ್ ವಿಂಡೊ, ಕ್ಯಾಪ್ಟನ್‌ ಅಮೆರಿಕ ಸೇರಿದಂತೆ ದಿ ಅವೇಂಜರ್‌ ಸರಣಿಯ ಸಿನಿಮಾಗಳು ಸ್ಕಾರ್ಲೆಟ್‌ಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿವೆ.

ಸ್ಕಾರ್ಲೆಟ್‌ ಅವರ ಜಂಗಲ್‌ಬುಕ್‌ 2 , ಎಸ್‌ಐಎನ್‌ಜಿ 2 ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT