ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತಾಯಣ ಟೀಸರ್‌ ಬಿಡುಗಡೆ

Last Updated 11 ನವೆಂಬರ್ 2020, 9:42 IST
ಅಕ್ಷರ ಗಾತ್ರ

ಹಿರಿಯ ನಟ ಶಶಿಕುಮಾರ್‌ ಅವರ ಪುತ್ರ ಅಕ್ಷಿತ್‌ ಶಶಿಕುಮಾರ್‌ ಅಭಿನಯದ ‘ಸೀತಾಯಣ’ ಚಿತ್ರದ ಟೀಸರ್‌ ಯುಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ.

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ಟೀಸರ್‌ ಬಿಡುಗಡೆ ಮಾಡಿದ್ದಾರೆ.

ಕಲರ್ಸ್‌ ಕ್ಲೌಡ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯ ಅಡಿ ಲಲಿತಾ ರಾಜಲಕ್ಷ್ಮೀ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಗೊಳ್ಳಲಿದೆ.

ಟೀಸರ್‌ ಬಿಡುಗಡೆ ಮಾಡಿದ ಶಿವರಾಜ್‌ ಕುಮಾರ್‌ ಮಾತನಾಡಿ, ‘ಮೂರು ಭಾಷೆಯಲ್ಲಿ ಏಕಕಾಲದಲ್ಲಿ ಹೀರೊ ಆಗಿ ಪರಿಚಯವಾಗುವುದುಗೌರವದ ವಿಷಯ.ಈ ಚಿತ್ರದ ಟೀಸರ್ ನನ್ನ ಕೈಯಿಂದ ಬಿಡುಗಡೆಯಾಗುವುದೂ ನನಗೆ ತುಂಬಾ ಸಂತೋಷ ಉಂಟು ಮಾಡಿದೆ. ಟೀಸರ್ ತುಂಬಾ ಭರವಸೆ ಮೂಡಿಸಿದೆ.ಸಿನಿಮಾಯಶಸ್ವಿಯಾಗುವ ಎಲ್ಲಾ ಲಕ್ಷಣಗಳಿವೆʼ ಎಂದರು.

ಮುಂಬೈಬೆಡಗಿಅನಹಿತಭೂಷಣ್ ಚಿತ್ರದ ನಾಯಕಿ. ವಿಕ್ರಂಶರ್ಮ, ಶರ್ಮಿತಾಗೌಡ, ಮಧುಸೂದನ್, ಮೇಘನಾಗೌಡ, ಅಜಯ್‌ಘೋಷ್, ಹಿತೇಶ್, ವಿಧೆಯು ಲೇಖರಮನ್, ಬಿತ್ರಿಸತ್ತಿ, ಟಿಎನ್‌ಆರ್, ಕೃಷ್ಣಭಗವಾನ್, ಬೇಬಿ ಟ್ರೈಕ್ಷಾ, ಅನಂತಬಾಬು, ಗುಂಡು ಸುದರ್ಶನ್, ಮಧುಮಣಿ, ಜಬರ್‌ದಸ್ತ್ ಅಪ್ಪರಾವ್, ಲೋಬೋ ತಾರಾಗಣದಲ್ಲಿದ್ದಾರೆ.

ಕವಿರಾಜ್, ಗೌಸ್‌ಪೀರ್ ಸಾಹಿತ್ಯವಿದೆ.ಪದ್ಮನಾಭ್ ‌ಭಾರದ್ವಾಜ್ ಸಂಗೀತ ನೀಡಿದ್ದಾರೆ. 63 ದಿನಗಳಕಾಲ ಚಿತ್ರೀಕರಣ ನಡೆದಿದೆ. ದುರ್ಗಾಪ್ರಸಾದ್‌ ಕೊಲ್ಲಿ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT