ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಸಬ್ಸಿಡಿಯಲ್ಲಿ ಅಕ್ರಮ: ಆಯ್ಕೆ ಪಟ್ಟಿಗೆ ತಡೆ

Last Updated 23 ಸೆಪ್ಟೆಂಬರ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ಗುಣಾತ್ಮಕ ಚಲನಚಿತ್ರಗಳಿಗೆ ರಾಜ್ಯ ಸರ್ಕಾರ ನೀಡುವ ಸಹಾಯ ಧನಪ್ರಕ್ರಿಯೆಯಲ್ಲಿನ ಅಕ್ರಮಗಳಬಗ್ಗೆ ದೂರುಗಳು ಬಂದಿರುವುದರಿಂದ ಸಬ್ಸಿಡಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿ ತಡೆಹಿಡಿಯಲಾಗಿದೆ.

ಎರಡು ವರ್ಷಗಳ ಸಬ್ಸಿಡಿ ಚಿತ್ರಗಳ ಪಟ್ಟಿಗೆ ತಡೆಬಿದ್ದಿರುವುದನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಗಳು ಧೃಢಪಡಿಸಿವೆ.

2017ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಮತ್ತು ಸಹಾಯ ಧನಕ್ಕೆ 2018ನೇ ಸಾಲಿನ ಸಿನಿಮಾಗಳನ್ನು ಪರಿಗಣಿಸಿ ಆಯಾಯ ವರ್ಷದಲ್ಲಿ ನಿರ್ಮಾಣವಾದ ಸಿನಿಮಾಗಳಿಗೆ ಅನ್ಯಾಯವೆಸಲಾಗಿದೆ ಎಂದು ಆರೋಪಿಸಿ ನಿರ್ಮಾಪಕ ಮತ್ತು ನಿರ್ದೇಶಕ ನರಸಿಂಹರಾಜು, ದಾಖಲೆ ಸಮೇತ ಇಲಾಖೆಯ ಆಯುಕ್ತ ಎಸ್‌.ಎನ್‌.ಸಿದ್ದರಾಮಪ್ಪ ಅವರಿಗೆ ದೂರು ಸಲ್ಲಿಸಿದ್ದರು.

ಸಬ್ಸಿಡಿಗಾಗಿ 2017ನೇ ಸಾಲಿಗೆ 203 ಮತ್ತು 2018ನೇ ಸಾಲಿಗೆ 291 ಚಿತ್ರಗಳ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದರು. ಆದರೆ, ಸೆನ್ಸಾರ್‌ ಮಂಡಳಿಯ ಪ್ರಾದೇಶಿಕ ಅಧಿಕಾರಿಯ ಶಿಫಾರಸು ಆಧರಿಸಿ 2017ರ ಸಾಲಿನ ಸಬ್ಸಿಡಿ ಚಿತ್ರಗಳ ಪಟ್ಟಿಗೆ 2018ನೇ ಸಾಲಿನ ಏಳು ಚಿತ್ರಗಳನ್ನು ಸೇರಿಸಲಾಗಿದೆ. ಹಾಗೆಯೇ 2018ರ ಸಾಲಿನ ಸಬ್ಸಿಡಿಗೆ 2019ರ ಸಾಲಿನ 16 ಸಿನಿಮಾಗಳನ್ನು ಸೇರಿಸಲಾಗಿದೆ. ಇದೊಂದು ದೊಡ್ಡ ಅಕ್ರಮವಾಗಿದ್ದು, ಈ ಬಗ್ಗೆ ತನಿಖೆ ಮಾಡಬೇಕು ಎಂದುನರಸಿಂಹರಾಜು, ಆಯುಕ್ತರನ್ನು ಒತ್ತಾಯಿಸಿದ್ದರು.

ಈ ರೀತಿ ನಿಯಮ ಬಾಹಿರವಾಗಿ ಮುಂದಿನ ಸಾಲಿನ ಚಿತ್ರಗಳನ್ನು ಹಿಂದಿನ ಸಾಲಿಗೆ ಸೇರಿಸಿ, ಸಬ್ಸಿಡಿ ಮತ್ತು ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ನೀಡುವುದು ಸರ್ಕಾರವೇ ರೂಪಿಸಿರುವ ನೀತಿಗೆ ವಿರುದ್ಧವಾದುದು.ಸಬ್ಸಿಡಿಗೆ, ಪ್ರಶಸ್ತಿಗೆ ಪರಿಗಣಿಸುವಾಗ ಅದೇ ವರ್ಷ ಜನವರಿ 1ರಿಂದ ಡಿಸೆಂಬರ್‌ 31ರವರೆಗೆ ನಿರ್ಮಾಣವಾದಚಿತ್ರಗಳನ್ನು ಮಾತ್ರ ಪರಿಗಣಿಸಬೇಕು ಎಂಬುದನ್ನು ಅವರು ಇಲಾಖೆಯ ಗಮನಕ್ಕೆ ತಂದಿದ್ದರು.

‘ಪ್ರಜಾವಾಣಿ’ ಈ ಬಗ್ಗೆಇಲಾಖೆಯ ಆಯುಕ್ತ ಸಿದ್ದರಾಮಪ್ಪ ಅವರ ಪ್ರತಿಕ್ರಿಯೆ ಪಡೆಯಲು ಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್‌ ಅಬ್ಬೂರು ಪ್ರತಿಕ್ರಿಯಿಸಲು ನಿರಾಕರಿಸಿದರು.

ಸಿನಿಮಾ ಸಬ್ಸಿಡಿ ವ್ಯವಸ್ಥೆಯಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ‘ಪ್ರಜಾವಾಣಿ’ ‘ಒಳನೋಟ’ ವಿಶೇಷ ವರದಿಯಅಂಕಣದಲ್ಲಿಬೆಳಕು ಚೆಲ್ಲಿತ್ತು.

2017ನೇ ಸಾಲಿಗೆ ಸೇರಿಸಿರುವ 2018ರ ಸಾಲಿನ ಚಿತ್ರಗಳು: ನಮ್ಮ ಮಗು, ಮೆಟಡೇರ್‌, ಓಂ ಬಾಲಸಾಯಿ, ಎಂಡೋಸಲ್ಪಾನ್, ಮಸ್ತ ಕಲಂದರ್‌, ಬೆಸ್ಟ್‌ ಫ್ರೆಂಡ್‌– ಇದು ತೀರ್ಪು ನೀಡಲಾಗದ ಪ್ರೇಮ ಕಥೆ, ಮದರ್ ಸವಿತಾ.

2018ನೇ ಸಾಲಿಗೆ ಸೇರಿಸಿರುವ 2019ರ ಸಾಲಿನ ಚಿತ್ರಗಳು: ಅರಬ್ಬಿ ಕಡಲತೀರದಲಿ, ನೃತ್ಯಂ, ಪುಟಾಣಿ ಪವರ್‌ (ಮಕ್ಕಳ ಚಿತ್ರ), ವೃಕ್ಷಂ (ಮಕ್ಕಳ ಚಿತ್ರ), ಲೋಫರ್ಸ್‌, ಕುಂಟ ಕೋಣ ಮೂಕ ಜಾಣ, ಸೂಪರ್‌ ಹೀರೊ, ಸಮಾನತೆಯ ಕಡೆಗೆ, ಅರಿಷಡ್ವರ್ಗ, ಒನ್‌ ಲವ್‌ ಟೂ ಸ್ಟೋರಿ, 96, ಛೇರ್ಮನ್‌, ಏಕತೆ, ತ್ರಯೋದಶ, ಸೂಜಿ ಪಾಸ್‌ (ಮಕ್ಕಳಚಿತ್ರ), ಜೈ ಕೇಸರಿ ನಂದನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT