ಸೋಮವಾರ, ಮೇ 17, 2021
27 °C

ಟೀಸರ್‌ | 'ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ'ಯಲ್ಲಿ ಮೊಬೈಲ್ ಗೀಳಿನ 'ಸೃಜನ್' ಕಾಮಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ

ಬೆಂಗಳೂರು: ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಚಿತ್ರದ ಟೀಸರ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿದೆ.

ಕಳೆದ ಎರಡು ದಿನಗಳ ಹಿಂದೆ ಬಿಡುಗಡೆಯಾದ ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಟೀಸರ್, ಇಲ್ಲಿಯವರೆಗೂ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಹಾಸ್ಯಭರಿತವಾಗಿ ಮೊಬೈಲ್ ಗೀಳಿನಿಂದ ಜನರು ಹೊರ ಬರಬೇಕು ಎಂದು ಸಂದೇಶವನ್ನು ಸಾರುವ ಚಿತ್ರ ಇದಾಗಿದೆ. 

ನಗರಗಳ ಸಿಗ್ನಲ್‌ಗಳಲ್ಲಿ ವಾಹನ ನಿಲ್ಲಿಸಿಕೊಂಡು ಇದ್ದಾಗ, ಪುಟ್ಟ ಕಂದಮ್ಮಗಳ ಕೈಗಳು ಸಹಾಯ ಯಾಚಿಸುವುದುಂಟು. ಅವರು ಸ್ವಲ್ಪ ಕಾಸು ಅಥವಾ ಆಹಾರವನ್ನು ಕೇಳುತ್ತಾರೆ. ಆದರೆ, ಗುಂಡು ಮುಖದ, ಒಳ್ಳೊಳ್ಳೆ ಬಟ್ಟೆ ತೊಟ್ಟ ಪುಟಾಣಿಗಳು ತಮ್ಮ ಮೊಬೈಲ್‌ಗೆ ‘ಡೇಟಾ ಕೊಡಿ ಅಂಕಲ್, ಡೇಟಾ ಕೊಡಿ ಆಂಟಿ’ ಎಂದು ಕೇಳುತ್ತಾರೆ. ನಂತರ ಕತ್ತು ವಾಲಿಸಿಕೊಂಡವರ ಮದುವೆ ಸಂಭ್ರಮವು ಟೀಸರ್‌ನಲ್ಲಿದೆ. ತಿಥಿ ಖ್ಯಾತಿಯ ಸೆಂಚುರಿ ಗೌಡ ಹಾಗೂ ಬ್ರಹ್ಮಾಂಡ ಗುರೂಜಿಯ ಹಿನ್ನೆಲೆ ಧ್ವನಿಯೂ ಪ್ರೇಕ್ಷಕರಿಗೆ ಹೆಚ್ಚು ಆಪ್ತವಾಗುವಂತೆ ಮಾಡಿದೆ.

ಮೊಬೈಲ್‌ ದುಷ್ಪರಿಣಾಮಗಳಿಂದ ಜನರನ್ನು ರಕ್ಷಿಸಲು ‘ಪಲ್ಸ್‌ಮೊಲಿಯೊ‘ ಎಂಬ ಹನಿಯನ್ನು ಸಾರ್ವಜನಿಕರಿಗೆ ಹಾಕಲಾಗುವ ದೃಶ್ಯಯೂ ಕಚಗುಳಿ ಹಿಡುತ್ತದೆ. ಒಟ್ಟಾರೆ ಅಪ್ಪ–ಅಮ್ಮನಿಂದ ಆರಂಭವಾಗಿ ಚಿಕ್ಕ ಮಕ್ಕಳವರೆಗೂ ವ್ಯಾಪಿಸಿರುವ ಮೊಬೈಲ್‌ ಗೀಳಿನ ಕುರಿತಾದ ಸಿನಿಮಾವೇ ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’. 

ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಮಧುಚಂದ್ರ ಅವರು ನಿರ್ದೇಶಿಸಿರುವ ಈ ಚಿತ್ರವನ್ನು ಒಟ್ಟು ನಲವತ್ತು ಜನ ಸೇರಿ ನಿರ್ಮಾಣ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು