ಮಂಗಳವಾರ, ಏಪ್ರಿಲ್ 7, 2020
19 °C

ಬಾಲಿವುಡ್ ಹಿರಿಯ ನಟಿ ನಿಮ್ಮಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಹಿರಿಯ ನಟಿ ನಿಮ್ಮಿ (88) ಅಲ್ಪಕಾಲದ ಅನಾರೋಗ್ಯದಿಂದಾಗಿ ಬುಧವಾರ ಮುಂಬೈನಲ್ಲಿ ನಿಧನರಾದರು. ಖ್ಯಾತ ನಟರಾದ ದೇವ್ ಆನಂದ್, ರಾಜ್ ಕಪೂರ್, ದಿಲೀಪ್ ಕುಮಾರ್ ಅವರ ಚಿತ್ರಗಳಲ್ಲಿ ನಿಮ್ಮಿ ನಟಿಸಿದ್ದರು. ತಮ್ಮ ಕಾಲದ ನಾಯಕಿಯರಾದ ಮಧುಬಾಲಾ, ನರ್ಗಿಸ್, ಸುರೈಯಾ, ಮೀನಾ ಕುಮಾರಿ ಹಾಗೂ ಗೀತಾ ಬಾಲಿ ಅವರೊಂದಿಗೂ ಅಭಿನಯಿಸಿದ್ದರು.

ಬರ್ಸಾತ್ (1949), ದೀದಾರ್(1951), ದಾಗ್ (1952), ಆನ್ (1952), ಅಮರ್ (1954), ಕುಂದನ್ (1955), ಬಸಂತ್ ಬಹಾರ್ (1956) ಅವರ ನಟನೆಯ ಕೆಲವು ಚಿತ್ರಗಳು.

ಬರ್ಸಾತ್ ಚಿತ್ರ ಆರಂಭಕ್ಕೂ ಮೊದಲು ರಾಜ್ ಕಪೂರ್ ಅವರು, ನವಾಬ್ ಬನೂ ಎನ್ನುವ ಮೂಲ ಹೆಸರನ್ನು ಚಿತ್ರಕ್ಕಾಗಿ ನಿಮ್ಮಿ ಎಂದು ಬದಲಿಸಿದ್ದರು.

ನಿಮ್ಮಿ ಅವರ ನಿಧನಕ್ಕೆ, ದಿಲೀಪ್ ಕುಮಾರ್ ಪತ್ನಿ ಸಾಯಿರಾ ಬಾನು, ನಟ ರಿಷಿ ಕಪೂರ್, ಚಿತ್ರ ನಿರ್ದೇಶಕ ಮಹೇಶ್ ಭಟ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)