ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕಾಲದಲ್ಲಿ ದಾದಿಯರ ಸೇವೆ ಬಿಂಬಿಸುವ ‘ಸೆಪ್ಟೆಂಬರ್‌ 13’ ಬಿಡುಗಡೆಗೆ ಸಿದ್ಧ

Last Updated 9 ಜೂನ್ 2022, 19:30 IST
ಅಕ್ಷರ ಗಾತ್ರ

ಕೋವಿಡ್‌ ದುರಿತದ ಕಾಲದಲ್ಲಿ ದಾದಿಯರ ಸೇವೆ, ತ್ಯಾಗ ಬಿಂಬಿಸುವ ಚಿತ್ರ ಸೆಪ್ಟೆಂಬರ್‌ 13 ಬಿಡುಗಡೆಯ ಹಂತದಲ್ಲಿದೆ. ವಿಧಾನ ಪರಿಷತ್‌ ಮಾಜಿ ಸದಸ್ಯ ಐವಾನ್‌ ನಿಗ್ಲಿ ಅವರು ತಮ್ಮ ರೂಬಿ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ಈ ಚಿತ್ರ ನಿರ್ಮಿಸಿದ್ದಾರೆ. ಅವರ ಬಳಗದ 11 ಮಂದಿ ಈ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.

‘ನಾನೂ ಬದುಕಿ ಬೆಳೆದದ್ದು ದಾದಿಯರಿಂದಲೇ. ಹಾಗಾಗಿ ಅವರ ಸಮುದಾಯದ ಬಗ್ಗೆ ತುಂಬಾ ಪ್ರೀತಿ ಗೌರವ ಇದೆ. ಇದೇ ವೇಳೆ ಫ್ಲಾರೆನ್ಸ್‌ ನೈಂಟಿಂಗೇಲ್‌ ಅವರ ಬಗ್ಗೆ ಅಧ್ಯಯನ ಮಾಡುತ್ತಾ ಹೋದೆ. ಆಗ ದಾದಿಯರ ಸೇವಾ ಕ್ಷೇತ್ರದ ಅರಿವು ಇನ್ನಷ್ಟು ವಿಸ್ತಾರವಾಯಿತು. ದಾದಿಯರಿಗಾಗಿ ಬೆಂಗಳೂರಿನ ಆಂಗ್ಲೋ ಇಂಡಿಯನ್‌ ಯುನಿಟಿ ಸೆಂಟರ್‌ ಮತ್ತು ಕರ್ನಾಟಕ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಫ್ಲಾರೆನ್ಸ್‌ ನೈಂಟಿಂಗೇಲ್‌ ಪ್ರಶಸ್ತಿ ಸ್ಥಾಪಿಸಿದ್ದೇನೆ. ಈಗ ಅವರ ಗೌರವಾರ್ಥ ಈ ಚಿತ್ರ ನಿರ್ಮಿಸುತ್ತಿದ್ದೇನೆ’ ಎಂದರು ಐವನ್‌ ನಿಗ್ಲಿ.

‘ಚಿತ್ರಕ್ಕೆ ಡಾ.ರಾಜ ಬಾಲಕೃಷ್ಣ ಅವರ ನಿರ್ದೇಶನವಿದೆ. ಕಥೆಯೂ ನಿಗ್ಲಿ ಅವರದ್ದೇ. ಶ್ರೇಯಾ ರಿಧಿಬನ್‌, ಚಿಂತನ್‌ ರಾವ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜೈಜಗದೀಶ್‌, ವಿನಯಾ ಪ್ರಸಾದ್‌ ಅವರೂ ತಾರಾಗಣದಲ್ಲಿದ್ದಾರೆ ಸುಮಾರು 100 ದಾದಿಯರು ಒಂದು ಹಾಡಿನಲ್ಲಿ ನೃತ್ಯ ಮಾಡಿದ್ದಾರೆ. ಜೂನ್‌ ಕೊನೆಯ ವಾರದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ’ ಎಂದು ನಿಗ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT