ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠಾಣ್ ಸಿನಿಮಾ ನೋಡುವಾಗ ಬಜರಂಗ ದಳದವರ ಮೇಲೆ ಹಲ್ಲೆ ಮಾಡಿದರೇ ಶಾರುಖ್ ಅಭಿಮಾನಿಗಳು?

Last Updated 3 ಫೆಬ್ರುವರಿ 2023, 2:25 IST
ಅಕ್ಷರ ಗಾತ್ರ

ಸಿನಿಮಾ ಮಂದಿರದಲ್ಲಿ ಹಲವು ಜನರು ಪರಸ್ಪರ ಹೊಡೆದಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿನಿಮಾ ಮಂದಿರದಲ್ಲಿ ‘ಪಠಾಣ್‌’ ಸಿನಿಮಾದ ಪೋಸ್ಟರ್‌ ಇರುವುದು ಆ ದೃಶ್ಯದಲ್ಲಿ ಕಾಣುತ್ತದೆ. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಈ ವಿಡಿಯೊ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆಯಾಗಿದೆ. ‘ಶಾರುಕ್‌ ಖಾನ್‌ ಅಭಿಮಾನಿಗಳು ಬಜರಂಗ ದಳದ ಕಾರ್ಯಕರ್ತರಿಗೆ ಹೊಡೆಯುತ್ತಿದ್ದಾರೆ’ ಎಂದು ಈ ವಿಡಿಯೊಗೆ ಅಡಿಬರಹ ನೀಡಲಾಗಿದೆ. ಆದರೆ, ಈ ಅಡಿಬರಹದಲ್ಲಿ ನೀಡಿರುವ ಮಾಹಿತಿ ಸುಳ್ಳು.

‘ಇದು ಸುಳ್ಳು ಸುದ್ದಿ. ಉತ್ತರ ಪ್ರದೇಶದ ಅಮ್ರೋಹಾದಲ್ಲಿನ ಮಧು ಸಿನಿಮಾ ಮಂದಿರದಲ್ಲಿ ಈ ವಿಡಿಯೊವನ್ನು ಜನವರಿ 26ರಂದು ಚಿತ್ರೀಕರಿಸಲಾಗಿದೆ. ಸಿನಿಮಾ ಮಂದಿರದಲ್ಲಿ ಮುಂಗಡವಾಗಿ ಕಾಯ್ದಿರಿಸಿದ್ದರೂ, ತಂಪು ಪಾನೀಯವನ್ನು ನೀಡಿಲ್ಲ ಎಂದು ಕೆಲವು ಮಂದಿಯ ಗುಂಪು ಸಿಬ್ಬಂದಿ ಜತೆಗೆ ಆಕ್ಷೇಪ ಎತ್ತಿದ್ದರು. ಆಗ ಬೇರೊಂದು ತಂಡಕ್ಕೆ ನೀಡಲು ತಂದಿದ್ದ ತಂಪು ಪಾನೀಯವನ್ನು ಮೊದಲ ಗುಂಪಿಗೆ ನೀಡಲಾಗಿತ್ತು. ಆಗ ಎರಡೂ ಗುಂಪಿನ ಮಧ್ಯೆ ಹೊಡೆದಾಟ ನಡೆದಿತ್ತು. ಈ ಬಗ್ಗೆ ‘ಆಜ್‌ತಕ್‌’ ವರದಿ ಮಾಡಿದೆ. ಅಮ್ರೋಹಾ ಡಿಎಸ್‌ಪಿ ವಿಜಯ್ ಕುಮಾರ್ ರಾಣಾ ಅವರೂ ಇದನ್ನು ದೃಢಪಡಿಸಿದ್ದಾರೆ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT