ಗುರುವಾರ , ಆಗಸ್ಟ್ 18, 2022
25 °C

'ಶಾರುಖ್ ಖಾನ್ ನನ್ನ ಸುರಕ್ಷಿತ ತಾಣ' ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದೇಕೆ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇದೀಗ ಯಶಸ್ವಿ ನಟಿಯರಲ್ಲಿ ಒಬ್ಬರು. ನಟ ಶಾರುಖ್ ಖಾನ್‌ ಅವರೊಂದಿಗೆ ತೆರೆಹಂಚಿಕೊಳ್ಳುವ ಮೂಲಕ ಫರಾ ಖಾನ್ ನಿರ್ದೇಶನದ 'ಓಂ ಶಾಂತಿ ಓಂ' ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದಲೂ ಎಸ್‌ಆರ್‌ಎಕೆ ಜೊತೆಗಿನ ಅವರ ಸಂಬಂಧ ಬಲವಾಗುತ್ತಲೇ ಸಾಗಿದೆ. ಬಳಿಕ ಹ್ಯಾಪಿ ನ್ಯೂ ಇಯರ್ ಮತ್ತು ಚೆನ್ನೈ ಎಕ್ಸ್‌ಪ್ರೆಸ್‌ ಚಿತ್ರಗಳಲ್ಲಿ ಅವರೊಂದಿಗೆ ಕೆಲಸ ಮಾಡಿದರು. ಇದೀಗ ದೀಪಿಕಾ 'ಪಠಾಣ್‌'ಗಾಗಿ ಮತ್ತೆ ಶಾರುಖ್ ಖಾನ್‌ ಅವರೊಂದಿಗೆ ನಟಿಸಲು ಸಿದ್ಧರಾಗಿದ್ದಾರೆ.

ಇಂಡಿಯಾ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಎಸ್‌ಆರ್‌ಕೆ ಜೊತೆ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುವ ಕುರಿತು ದೀಪಿಕಾ ಮಾಹಿತಿ ನೀಡಿದ್ದಾರೆ. ಸದ್ಯ ಶಾರುಖ್ ಖಾನ್ ಅವರೊಂದಿಗೆ ಮತ್ತೊಂದು ಸಿನಿಮಾಗಾಗಿ ನಟಿಸುತ್ತಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಇನ್ನೊಂದು ಶೆಡ್ಯೂಲ್ ಬಾಕಿಯಿದೆ ಎಂದಿದ್ದಾರೆ.

'ನಮಗೆ ಕೇವಲ ಒಂದು ವೇಳಾಪಟ್ಟಿ ಬಾಕಿ ಉಳಿದಿದೆ. ಆದರೆ, ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಅದ್ಭುತವಾಗಿರುತ್ತದೆ. ನಾನು ಮನೆಯಲ್ಲಿರುತ್ತೇನೆ, ನಾನು ಸುರಕ್ಷಿತವಾಗಿರುತ್ತೇನೆ, ಅವರಿರುವ ಕಾರಣಕ್ಕೆ ನಾನು ಭದ್ರವಾಗಿರುತ್ತೇನೆ. ಸಿದ್ದಾರ್ಥ್ ಆನಂದ್ (ಪಠಾಣ್‌ ನಿರ್ದೇಶಕ) ಅವರೊಂದಿಗೂ ಕೂಡ ಕ್ಷೇಮವಾಗಿರುತ್ತೇನೆ. ಈ ಮೊದಲು 10 ವರ್ಷಗಳ ಹಿಂದೆ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಇದೀಗ ಅವರು ನಿರ್ದೇಶಕರಾಗಿ ತುಂಬಾ ವಿಕಸನಗೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಹೌದು, ನಾನು ಎಸ್‌ಆರ್‌ಕೆ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಅವರು ನನ್ನ ಸುರಕ್ಷಿತ ತಾಣ' ಎಂದು ದೀಪಿಕಾ ತಿಳಿಸಿದ್ದಾರೆ.

ದೀಪಿಕಾ ಅವರ ಕೈಯಲ್ಲೀಗ ಸಾಲು ಸಾಲು ಚಿತ್ರಗಳಿದ್ದು, ಅವರೀಗ ಬ್ಯುಸಿಯಾಗಿರುವ ನಟಿ ಎಂಬುದು ತಿಳಿಯುತ್ತದೆ. ಗೆಹೆರಾಯಿಯಾಂ ಸಿನಿಮಾದ ನಂತರ ದೀಪಿಕಾ ಅವರ ಬಳಿ 5 ಸಿನಿಮಾಗಳಿದ್ದು, ಇದೀಗ ಪಠಾಣ್ ಕೂಡ ಸೇರಿಕೊಂಡಿದೆ.

ದೀಪಿಕಾ ಅವರು ಫೈಟರ್ ಸಿನಿಮಾದಲ್ಲಿ ನಟ ಹೃತಿಕ್ ರೋಷನ್ ಅವರೊಂದಿಗೂ ತೆರೆಹಂಚಿಕೊಳ್ಳುತ್ತಿದ್ದು, ಇವರಿಬ್ಬರ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಿದೆ. ಇದನ್ನ ಹೊರತು ಪಡಿಸಿ ಪ್ರಭಾಸ್ ಅವರೊಂದಿಗೆ Project K ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಮಧು ಮಂತೇನಾ ಅವರ ಹೆಸರಿಡದ ಚಿತ್ರವೂ ದೀಪಿಕಾ ಅವರ ಬಳಿಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು