ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹಿದ್‌ ಸಿನಿಮಾ ಸದ್ಯಕ್ಕಿಲ್ಲ

Last Updated 14 ಜುಲೈ 2019, 19:45 IST
ಅಕ್ಷರ ಗಾತ್ರ

ಶಾಹಿದ್‌ ಕಪೂರ್‌ ನಟನೆಯ ‘ಕಬೀರ್‌ ಸಿಂಗ್‌’ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ₹250 ಕೋಟಿ ಬಾಚಿಕೊಂಡಿದೆ. ಈ ಸಿನಿಮಾದ ಗಳಿಕೆಯು ₹ 300 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಸಿನಿಮಾದ ಯಶಸ್ಸಿನಲ್ಲಿ ಬೀಗುತ್ತಿರುವ ನಟ ಶಾಹಿದ್‌ ಕಪೂರ್‌ ಈಗ ಯಾವುದೇ ಸಿನಿಮಾಕ್ಕೆ ಸಹಿ ಹಾಕಿಲ್ಲ.

ಸಿನಿಜಗತ್ತಿನಲ್ಲಿ ಯಾವುದಾದರೂ ಸಿನಿಮಾ ಹಿಟ್‌ ಗಳಿಸಿದಾಕ್ಷಣ ನಟ, ನಟಿಯರಿಗೆ ಬೇಡಿಕೆ ಹೆಚ್ಚಾಗುತ್ತದೆ. ಆದರೆ ‘ಚಿತ್ರಕತೆ ಬಗ್ಗೆ ಯೋಚಿಸಬೇಕಾಗುತ್ತದೆ. ನನಗೆ ಮುಂದಿನ ಚಿತ್ರದಲ್ಲಿ ನಟಿಸಲು ಅವಸರವೇನಿಲ್ಲ. ಚಿತ್ರ ಆಯ್ಕೆಗೆಸಮಯಾವಕಾಶ ಬೇಕು’ ಎಂದು ಶಾಹಿದ್‌ ಹೇಳಿರುವುದು ಅವರ ಅಭಿಮಾನಿಗಳಿಗೆ ಕೊಂಚ ನಿರಾಶೆ ತಂದಿದೆ.

‘ಕಬೀರ್‌ ಸಿಂಗ್‌’ ಚಿತ್ರದ ದೊಡ್ಡ ಯಶಸ್ಸಿನಿಂದ ಕಬೀರ್‌ ಉಬ್ಬಿಹೋಗಿಲ್ಲ. ಈ ಖುಷಿಯನ್ನು ತನ್ನ ಕುಟುಂಬ ಸದಸ್ಯರೊಂದಿಗೆ ಆಚರಿಸಿಕೊಂಡಿದ್ದಾರೆ. ‘ಶಾಹಿದ್‌ ಯಾವಾಗಲೂ ಕೆಲಸದ ಕಡೆ ಗಮನ ಕೊಡುವವರು. ಚಿತ್ರದ ಯಶಸ್ಸು ಅವರ ನಂಬಿಕೆಗಳನ್ನು ಬದಲಾಯಿಸಿಲ್ಲ’ ಎಂದು ಆಪ್ತಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT